ಉಡುಪಿ, ಡಿ 28 (Daijiworld News/MB) : ಉತ್ತರ ಪ್ರದೇಶ ಮಾದರಿಯಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡಿದವರ ಆಸ್ತಿ ಜಪ್ತಿ ಮಾಡಲು ಸರಕಾರ ಮುಂದಾಗಿದೆ, ಆದರೆ ಹಾನಿ ಮಾಡಿದವರ ಆಸ್ತಿ ಜಪ್ತಿ ಮಾಡುವ ಯಾವುದೇ ಕಾಯ್ದೆಯಿಲ್ಲ ಎಂದು ನೀರಾವರಿ ಮತ್ತು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, "ಸಾರ್ವಜನಿಕ ಆಸ್ತಿ ಹಾನಿ ಮಾಡಿದವರ ಆಸ್ತಿ ಜಪ್ತಿ ಮಾಡುವ ಯಾವುದೇ ಕಾಯ್ದೆಯಿಲ್ಲ, ಆದರೆ ಆದರೆ ಸಾರ್ವಜನಿಕರ ಆಸ್ತಿ ನಷ್ಟ 2 ಎ ಕಾಯ್ದೆ ಯಡಿ ಶಿಕ್ಷೆ ಮತ್ತು ದಂಡನೆಗೆ ಅವಕಾಶವಿದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಸಾರ್ವಜನಿಕ ಆಸ್ತಿ ನಷ್ಟ ಮಾಡುವವರ ಆಸ್ತಿ ಜಪ್ತಿ ಮಾಡಲು ಕಾನೂನು ಇದೆ. ಆ ಮಾದರಿಯಲ್ಲೇ ಕರ್ನಾಟಕದಲ್ಲೂ ಕಾನೂನು ಜಾರಿಯಾದರೆ ಮಾತ್ರ ಆಸ್ತಿ ಜಪ್ತಿ ಕ್ರಮ ತೆಗೆದುಕೊಳ್ಳಲು ಸಾಧ್ಯ. ಈ ಕುರಿತು ಸರಕಾರ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.