ಮಂಗಳೂರು ಜ 23 : ಕೇಂದ್ರ ಸರ್ಕಾರ ಜಾರಿ ಮಾಡಿರುವ ವೇತನ ಮತ್ತು ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಒತ್ತಾಯಿಸುವಂತೆ ಆಲ್ ಇಂಡಿಯಾ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್ಸ್ (ಎಐಸಿಟಿಟಿಯು) ಮತ್ತು ಅಖಿಲ ಭಾರತ ಬಂದರುಗಳ ಕಾರ್ಮಿಕ ಒಕ್ಕೂಟ (ಎಐಪಿಡಬ್ಲ್ಯೂಎಫ್) ಜಂಟಿಯಾಗಿ ಜನವರಿ 29 ರಂದು ಅನಿರ್ದಿಷ್ಟ ಬಂದರು ಮುಷ್ಕರಕ್ಕೆ ಕರೆ ನೀಡಿದೆ.
ನಗರದ ಪ್ರೆಸ್ ಕ್ಲಬ್ ಜನವರಿ 23 ರ ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಎಐಪಿಡಬ್ಲ್ಯೂಎಫ್ ಉಪಾಧ್ಯಕ್ಷ ಶಂಕರ್, ಬಂದರಿನ ಒಳಗೆ ದುಡಿಯುತ್ತಿರುವ ಶಿಪ್ಪಿಂಗ್ ಕಾರ್ಮಿಕರು , ಗುಲಾಮಗಿರಿಯಂತ ಬದುಕು ನಡೆಸುತ್ತಿದ್ದಾರೆ. ಶಿಪ್ಪಿಂಗ್ ಕಂಪೆನಿಯೂ, ಕಾರ್ಮಿಕ ಕಾನೂನುಗಳನ್ನು ಜಾರಿಗೊಳಿಸಲು ಸಿದ್ಧವಾಗಿಲ್ಲ . ಸಮಾನ ವೇತನ, ಹೆಚ್ಚುವರಿ ಕೆಲಸದ ಸಂಬಳ, ವೈದ್ಯಕೀಯ ಸೌಲಭ್ಯ, ಭವಿಷ್ಯ ನಿಧಿ ಮುಂತಾದ ಯಾವುದೇ ಸೌಲಭ್ಯ ನೀಡುತ್ತಿಲ್ಲ. ಕಳೆದ ಹಲವು ವರ್ಷಗಳಿಂದ ಕಾರ್ಮಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಹಲವಾರು ರೀತಿಯ ಪ್ರಯತ್ನಗಳನ್ನು ಮಾಡಿದ್ರೂ ಶಿಪ್ಪಿಂಗ್ ಕಂಪನಿಯ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಕಾರ್ಮಿಕ ಮಾತುಗಳನ್ನು ಗಣನೆಗೆ ತೆಗೆದುಕೊಳ್ಳದೆ ಉದ್ದಟತದಿಂದ ವರ್ತಿಸಿದ್ದಾರೆ. ಹೀಗಾಗಿ ಜ 29 ರಿಂದ ಬಂದರು ಮುಷ್ಕರ ನಡೆಸಲು ಚಿಂತಿಸಲಾಗಿದೆ ಎಂದು ಹೇಳಿದರು
ಇದಕ್ಕೂ ಮುಂಚಿತವಾಗಿ ಜ 27 ರಂದು, ಜ್ಯೋತಿ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ತನಕ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಪತ್ರಿಕಾಗೋಷ್ಟಿಯಲ್ಲಿ ಸಾಮಾಜಿಕ ಕಾರ್ಯಕರ್ತೆ ವಿದ್ಯಾ ದಿನಕರ್, ರಾಜ್ಯ ಕಾರ್ಯದರ್ಶಿ ಅಪ್ಪಣ್ಣ, ಮೋಹನ್, ದಿವಾಕರ್ ಮತ್ತು ಇತರರು ಉಪಸ್ಥಿತರಿದ್ದರು.