ಬೆಂಗಳೂರು, ಡಿ 29 (DaijiworldNews/SM): ಕೃಷ್ಣೈಕ್ಯರಾದ ಪೇಜಾವರ ಮಠದ ಹಿರಿಯ ಯತಿ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಬೃಂದಾವನಸ್ಥರಾಗಿದ್ದಾರೆ. ಮಧ್ವ ಸಂಪ್ರದಾಯದಂತೆ ಶ್ರೀಗಳ ಪಾರ್ಥೀವ ಶರೀರದ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.
ಜಪ ಮಾಡುವ ಭಂಗಿಯಲ್ಲಿ ಪಾರ್ಥೀವ ಶರೀರವನ್ನು ಕೂರಿಸಲಾಗಿತ್ತು. ಇನ್ನು ಇದೇ ಸಂದರ್ಭ ಶ್ರೀಗಳು ಬಳಸುತ್ತಿದ್ದ ಪೂಜಾ ಸಾಮಾಗ್ರಿಗಳನ್ನು ಅದರೊಳಗಿಡಲಾಗಿದೆ. ಅಲ್ಲದೆ, ಹತ್ತಿ ಉಪ್ಪು, ಸಾಸಿವೆಯಿಂದ ಬೃಂದಾವನ ಮುಚ್ಚಲಾಗಿದೆ. ಬಳಿಕ ಮಣ್ಣಿನಿಂದ ಮುಚ್ಚಲಾಗಿದೆ.