ಕಾಸರಗೋಡು ಜ 24: ಪ್ರೇಮಿಗಳು ಕಾಡಿನಲ್ಲಿ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳ್ಳೂರಿನ ನೆಟ್ಟಣಿಗೆಯಲ್ಲಿ ನಡೆದಿದೆ. ನೆಟ್ಟಣಿಗೆ ಇಂದುಮೂಲೆಯ ಪುರುಷೋತ್ತಮ ( 20) ಮತ್ತು ಬೆಳ್ಳೂರು ಪೆರ್ವತ್ತೋಡಿಯ ಮಲ್ಲಿಕಾ (17) ಮೃತಪಟ್ಟವರು.
ಮಂಗಳವಾರ ಮಧ್ಯಾಹ್ನದಿಂದ ಇಬ್ಬರು ನಾಪತ್ತೆಯಾಗಿದ್ದರು. ರಾತ್ರಿಯಾದರೂ ಮರಳಿ ಬಾರದಿರುವುದರಿಂದ ಮನೆಯವರು ಶೋಧ ನಡೆಸಿದಾಗ ಇಬ್ಬರ ಮೃತದೇಹ ನೆಟ್ಟಣಿಗೆಯ ಕಾಡಿನಲ್ಲಿ ಮರವೊಂದಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತದೇಹವನ್ನು ಮಹಜರು ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗರದಲ್ಲಿರಿಸಲಾಗಿದ್ದು , ಇಂದು ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಿದೆ. ಪುರುಷೋತ್ತಮ ಕೂಲಿ ಕಾರ್ಮಿಕನಾಗಿದ್ದು , ಮಲ್ಲಿಕಾ ಎಸ್ ಎಸ್ ಎಲ್ ಸಿ ಶಿಕ್ಷಣ ಮುಗಿಸಿ ಟೈಲರಿಂಗ್ ಕಲಿಯುತ್ತಿದ್ದಳು ಆದೂರು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.