ಉಡುಪಿ, ಡಿ 31 (DaijiworldNews/SM): ಪೇಜಾವರ ಶ್ರೀಗಳ ಸಾಮಾಜಿಕ ಹೋರಾಟ, ಬೋಧನೆಗಳು ಅವರು ನಡೆದು ಬಂದ ಹಾದಿ, ಅವರ ಗುಣಗಳು ಸಮಾಜದ ಎಳಿಗೆಗೆ ಮಾರ್ಗದರ್ಶಕ ಸೂತ್ರಗಳಾಗಿವೆ. ಜಾತಿ, ಧರ್ಮ ಬೇಧ ಭಾವ ತೋರದು ಎಲ್ಲಾ ಧರ್ಮದ ಬಂಧುಗಳೊಂದಿಗೆ ಅವಿನಾಭಾವ ಬಾಂಧ್ಯವನ್ನು ಪೇಜಾವರ ಶ್ರೀಗಳು ಹೊಂದಿದ್ದರು ಎಂದು ಸಂಸ್ಕ್ರತ ಕಾಲೇಜಿನ ವೇದಾಂತ ವಿಭಾಗದ ಪ್ರಾಧ್ಯಾಪಕ ಡಾ. ಷಣ್ಮುಖ ಹೆಬ್ಬಾರ್ ಹೇಳಿದರು.
ಸರ್ವಧರ್ಮ ಸೌಹಾರ್ದ ಸಮಿತಿ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿ ವತಿಯಿಂದ ಕವಿ ಮುದ್ದಣ ಮಾರ್ಗ ಇಲ್ಲಿಯ ಶೋಕಮಾತ ಚರ್ಚಿನ ಪ್ರಾಂಗಣದಲ್ಲಿ ನಡೆದ ಬೃಂದಾವನಸ್ಥ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಅವರಿಗೆ ನುಡಿ ನಮನ, ಪುಷ್ಪ ನಮನ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಹಳಷ್ಟು ಸಭೆ ಸಮಾರಂಭಗಳಲ್ಲಿ ಶ್ರೀಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದೇನೆ. ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೆ. ಸಮಾಜದ ಹಿತಕ್ಕಾಗಿ ಎಳಿಗಾಗಿ ಪೇಜಾವರ ಶ್ರೀಗಳ ಪವಿತ್ರ ವ್ಯಕ್ತಿತ್ವ ಮಾರ್ಗದರ್ಶನವಾಗಿದೆ ಎಂದು ಸಂತಾಪ ಸಭೆಯಲ್ಲಿ ಸಾನಿಧ್ಯವಹಿಸಿದ ಶೋಕಮಾತ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ. ವಲೇರಿಯನ್ ಮೆಂಡೋನ್ಸ ಹೇಳಿದರು. ಕಾರ್ಯಕ್ರಮದಲ್ಲಿ ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಸಲಾಯಿತು.
ಕಾರ್ಯಕ್ರಮದಲ್ಲಿ ಸಹಾಯಕ ಧರ್ಮಗುರು ವಂದನೀಯ ಸ್ಟೀವನ್ ಫೆರ್ನಾಂಡಿಸ್, ಎಲ್ಲಾ ಆಯೋಗಗಳ ಸಂಯೋಜಕ ಅಲ್ಫೋನ್ಸ್ ಡಿ. ಕೋಸ್ತಾ, ಪಾಲನ ಮಂಡಳಿಯ ಉಪಾಧ್ಯಕ್ಷ ಇರ್ವಿನ್ ಆಳ್ವ, ಕಾರ್ಯದರ್ಶಿ ಗ್ರೆಸಿಯಸ್ ಬೊತೆಲ್ಲೊ, ನಾಗರಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಒಳಕಾಡು ಮತ್ತಿತರರು ಉಪಸ್ಥಿತರಿದ್ದರು.