ಮಂಗಳೂರು ಜ 24 : ಜನವರಿ 3 ರಂದು ಕಾಟಿಪಳ್ಳದಲ್ಲಿ ಹತ್ಯೆಯಾದ ದೀಪಕ್ ರಾವ್ ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಗಳೊಂದಿಗೆ ಸಂಚು ರೂಪಿಸಿ ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಮತ್ತೆ ಆರು ಜನರನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮೀಷನ್ ತಿಳಿಸಿದ್ದಾರೆ. ಅವರು ಜ 24 ರಂದು ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ ಕೊಲೆ ಸಂಚು ಹಾಗೂ ಕೊಲೆ ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಚೊಕ್ಕಬೆಟ್ಟುವಿನ ಮಹಮ್ಮದ್ ರಫೀಕ್ ಅಲಿಯಾಸ್ ಮಾಂಗೋ ರಫೀಕ್ (24),ಇರ್ಫಾನ್, ಕಾಟಿಪಳ್ಳದ ಮಹಮ್ಮದ್ ಅನಾಸ್ ಯಾನೆ ಅಂಚು, ಮಹಮ್ಮದ್ ಝಾಹೀದ್ ಯಾನೆ ಜಾಹೀ , ಜೋಕಟ್ಟೆಯ ನಿವಾಸಿ ನವಾಝ್ ಹಾಗೂ ಹಿದಾಯಿತುಲ್ಲಾ ಬಂದಿಸಿರುವುದಾಗಿ ಹೇಳಿದ್ದಾರೆ. ಈಗಾಗಲೇ ಪ್ರಕರಣದಲ್ಲಿ ಮೊಹಮ್ಮದ್ ನೌಶಾದ್ ಮತ್ತು ಮೊಹಮ್ಮದ್ ಇರ್ಷಾನ್ ಅಲಿಯಾಸ್ ಇರ್ಶಾ, ಮೊಹಮ್ಮದ್ ನವಾಜ್ ಅಲಿಯಾಸ್ ಪಿಂಕಿ ನಾವಾಝ್, ರಿಜ್ವಾನ್ ಅಲಿಯಾಸ್ ಇಜ್ಜು, ಅಬ್ದುಲ್ ಅಜೀಜ್ ಮತ್ತು ಅಬ್ದುಲ್ ಅಜೀಮ್ ನ್ನು ಪೊಲೀಸರು ಮೊದಲು ಬಂಧಿಸಿದ್ದಾರೆ ಅವರು ಈಗಾಗಲೇ ನ್ಯಾಯಂಗ ಬಂಧನದಲ್ಲಿದ್ದಾರೆ ಎಂದು ತಿಳಿಸಿದರು.
ಕೊಲೆಗೆ ಒಳಸಂಚು ರೂಪಿಸಿದ ಹಾಗೂ ಸಹಾಯ ಮಾಡಿದ ಪ್ರಮುಖ ಆರೋಪಿಗಳಾದ ಮಹಮ್ಮದ್ ರಫೀಕ್ ವಿರುದ್ದ ಸುರತ್ಕಲ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣ ಮತ್ತು ಇರ್ಫಾನ್ ವಿರುದ್ದ ಒಂದು ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಅನಸ್ ವಿರುದ್ದ ಸುರತ್ಕಲ್ ಠಾಣೆಯಲ್ಲಿ ಒಂದು ಕೊಲೆ ಯತ್ನ ಪ್ರಕರಣ, ಹಲ್ಲೆ ಪ್ರಕರಣ ದಾಖಲಾಗಿದೆ . ನಗರ ಗ್ರಾಮಾಂತರ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಝಾಹೀದ್ ವಿರುದ್ದ ಸುರತ್ಕಲ್ ಠಾಣೆಯಲ್ಲಿ ಎರಡು ಕೊಲೆ ಯತ್ನ ಪ್ರಕರಣ, ಕಳ್ಳತನ ಪ್ರಕರಣ ಹಾಗೂ ಒಂದು ಹಲ್ಲೆ ಪ್ರಕರಣ ದಾಖಲಾಗಿದೆ . ಹಿದಾಯಿತುಲ್ಲಾ ವಿರುದ್ದ ಅತ್ಯಾಚಾರ ಪ್ರಕರಣ , ನವಾಝ್ ವಿರುದ್ದ ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಅವರು ತಿಳಿಸಿದರು.