ಕಾಸರಗೋಡು, ಜ 01 (DaijiworldNews/SM): ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಎಂಡೋಸಲ್ಫಾನ್ ಸಂತ್ರಸ್ತ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಜಾಥಾ ನಡೆಸಲಾಯಿತು.
ಪಿಂಚಣಿ ಸೇರಿದಂತೆ ಸೌಲಭ್ಯಗಳನ್ನು ವಿತರಿಸಬೇಕು, ಸಂತ್ರಸ್ಥರ ಹಕ್ಕುಗಳನ್ನು ಕಸಿಯುವ ಆಡಳಿತ ವರ್ಗದ ಹುನ್ನಾರವನ್ನು ಸ್ಥಗಿತಗೊಳಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನು ಹೋರಾಟ ಸಮಿತಿ ಅಧ್ಯಕ್ಷೆ ಮುನಿಸಾ ಅಂಬಲತ್ತರ ಉದ್ಘಾಟಿಸಿದರು.ಝುಬೈರ್ ಪಡುಪ್ಪು, ಅಂಬಲತ್ತರ ಕುಞ ಕೃಷ್ಣನ್ ಪಿ. ಮಿಸ್ರಿಯಾ, ಶಿವಕುಮಾರ್ ಎಣ್ಮಕಜೆ ಮೊದಲಾದವರು ನೇತೃತ್ವ ನೀಡಿದರು.