ಮಂಗಳೂರು ಜ 24 : ಕೊಟ್ಟಾರ ಚೌಕಿ ಬಳಿ ಜ 3 ರಂದು ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಅಬ್ದುಲ್ ಬಷೀರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳನ್ನು ಬಂಧಿಸಿರುವುದಾಗಿ, ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್ ಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ಹಿಂದೆ್ ಶ್ರೀಜಿತ್, ಕಿಶನ್ ಪೂಜಾರಿ, ಧನುಷ್ ಪೂಜಾರಿ, ಸಂದೇಶ್ ಕೋಟ್ಯಾನ್, ಪುಷ್ಪರಾಜ್ ಮತ್ತು ಲತೇಶ್ ಅವರನ್ನು ಬಂಧಿಸಿಲಾಗಿತ್ತು. ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಗೊಳ್ತಮಜಲು ನಿವಾಸಿಯಾದ ಮಿಥುನ್ ಅಲಿಯಾಸ್ ಕಲ್ಲಡ್ಕ ಮಿಥುನ್ (28), ಬಂಟ್ವಾಳ ಹಾಗೂ ಆಕಾಶಭವನದ ನಿವಾಸಿ ತಿಲಕ್ ರಾಜ್ ಶೆಟ್ಟಿ (28) , ರಾಜು ಅಲಿಯಾಸ್ ರಾಜೇಶ್ (21) ಸಹಾಯ ಮಾಡಿದ್ದರೆ ಎಂದು ತಿಳಿದು ಬಂದಿದೆ ಅಲ್ಲದೆ ಇವರಿಗೆ ಅನುಪ್ ಕೂಡ ಇದರಲ್ಲಿ ನೆರವು ನೀಡಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ.ಇದೀಗ ಇವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಆರೋಪಿಗಳು ದೀಪಕ್ ರಾವ್ ಹತ್ಯೆಯ ಪ್ರತಿಕಾರವಾಗಿ ಜೈಲಿನಲ್ಲಿದ್ದ ಮಿಥುನ್ ನಲ್ಲಿ ಭೇಟಿಯಾಗಿ ಕೊಲೆ ಸಂಚು ರೂಪಿಸಿದ್ದರು. ಬಶೀರ್ ನನ್ನು ಕೊಲ್ಲಲು ಯಾವುದೇ ಪೂರ್ವದ್ವೇಷಗಳಿರಲಿಲ್ಲ. ಕೇವಲ ದೀಪಕ್ ರಾವ್ ಹತ್ಯೆ ಪ್ರಕರಣದಿಂದ ಪ್ರಚೋದನೆಗೆ ಒಳಗಾದ ಆರೋಪಿಗಳು ಕೊಟ್ಟಾರ ಚೌಕಿ ಬಳಿ ಯಾರನ್ನಾದರೂ ಕೊಲೆ ಮಾಡಬೇಕೆಂದು ಸಂಚು ಮಾಡಿದ್ದರು. ಈ ಸಂಚಿಗೆ ಆರೋಪಿಗಳು ಹೆಚ್ಚಾಗಿ ಭೇಟಿ ನೀಡುತ್ತಿದ್ದ ಫಾಸ್ಟ್ ಫುಡ್ ಅಂಗಡಿಯ ಮಾಲೀಕ ಬಶೀರ್ ಬಲಿಯಾಗಿಬಿಟ್ಟ ಎಂದು ಆರೋಪಿಗಳು ತಿಳಿಸಿರುವುದಾಗಿ ಸುರೇಶ್ ಕುಮಾರ್ ಹೇಳಿದ್ದಾರೆ.