ಮಂಗಳೂರು ಜ 25: ಜಪ್ಪಿನಮೊಗರು ತಾರ್ದೊಲ್ಯ ರಸ್ತೆಯ ಕಾಮಗಾರಿಗೆ ಜ 25 ರ ಗುರುವಾರ ಮಂಗಳೂರು ನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಗುದ್ದಲಿ ಪೂಜೆಯನ್ನ ನೆರವೇರಿಸಿದರು. ಬಳಿಕ ಮಾತನಾಡಿದ ಮೇಯರ್ , ಜಪ್ಪಿನಮೊಗರು-ತಾರ್ದೊಲ್ಯ ರಸ್ತೆ ಕಾಮಗಾರಿಗಾಗಿ ಸುಮಾರು 22 ಲಕ್ಷ ರೂಪಾಯಿಗಳ ಅನುದಾನ ಮಂಜೂರಾಗಿದ್ದು, ಶೀಘ್ರವೇ ಕಾಮಗಾರಿ ಸಂಪೂರ್ಣವಾಗುವ ಭರವಸೆ ವ್ಯಕ್ತಪಡಿಸಿದರು. ಜಪ್ಪಿನ ಮೊಗೆರು ಪ್ರದೇಶಕ್ಕೆ ಈ ಹಿಂದೆ ಹಲವು ಬಾರಿ ಭೇಟಿ ಮಾಡಿದ್ದೇನೆ. ಶಾಸಕರು ಹಾಗೂ ಸ್ಥಳೀಯ ನಿವಾಸಿಗಳು ಇಲ್ಲಿನ ರಸ್ತೆ ಸಮಸ್ಯೆಯನ್ನು ಗಮನಕ್ಕೆ ತಂದ ಹಿನ್ನಲೆಯಲ್ಲಿ ರಸ್ತೆ ಡಾಮರೀಕರಣಕ್ಕೆ ಅನುದಾನ ಬಿಡುಗಡೆ ಮಾಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ, ಶಾಸಕ ಜೆ.ಆರ್ ಲೋಬೊ ಮಾತನಾಡಿ ಜಪ್ಪಿನ ಮೊಗರು ಪ್ರದೇಶಕ್ಕೆ ಹಲವಾರು ಕಾಮಗಾರಿಗಳಿಗೆ ಚಾಲನೆ ದೊರೆಯಲಿದ್ದು, ಮುಂದಿನ ದಿನಗಳಲ್ಲಿ ಈ ಪ್ರದೇಶದ ಸಮಗ್ರ ಅಭಿವೃದ್ದಿ ಮಾಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ, ಜೆ ಉಮೇಶ್ಚಂದ್ರ , ಪಾಲಿಕೆ ಸದಸ್ಯ ಪ್ರವೀಣ್ ಚಂದ್ರ ಅಳ್ವ , ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.