ಬಂಟ್ವಾಳ, ಜ 06 (DaijiworldNews/SM): ಬಂಟ್ವಾಳ ಡಿ.ವೈ.ಎಸ್.ಪಿ.ಯಾಗಿ ವೆಲಂಟೈನ್ ಡಿ ಸೋಜ ಬಂಟ್ವಾಳ ಉಪವಿಭಾಗದ ಪ್ರಭಾರವನ್ನು ವಹಿಸಿಕೊಂಡಿದ್ದಾರೆ. ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್ ಅವರು ಬೆಂಗಳೂರು ಲೋಕಾಯುಕ್ತ ಎಸ್.ಪಿ.ಯಾಗಿ ಪದೋನ್ನತಿಗೊಂಡು ವರ್ಗಾವಣೆಯಾದ ಬಳಿಕ ತೆರವಾದ ಸ್ಥಾನಕ್ಕೆ ವೆಲೆಂಟೈನ್ ಡಿ.ಸೋಜ ಅವರು ಸೋಮವಾರ ಅಧಿಕಾರ ವಹಸಿಕೊಂಡಿದ್ದಾರೆ.
ಅವರು ಈ ಹಿಂದೆ ಬಂಟ್ವಾಳ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಆ ಬಳಿಕ ಮಂಗಳೂರು ನಗರ ವ್ಯಾಪ್ತಿ, ಕಾರವಾರ, ಇತ್ಯಾದಿ ಕಡೆಗಳಲ್ಲಿ ಕಾರ್ಯನಿರ್ಹಿಸಿದ್ದರು. ಮಂಗಳೂರು ನಗರ ಸಿ.ಸಿ.ಬಿಯಲ್ಲಿ ಡಿ.ವೈ.ಎಸ್.ಪಿಯಾಗಿದ್ದ ಸಂದರ್ಭದಲ್ಲಿ ಉತ್ತಮ ಕಾರ್ಯಗಳ ಮೂಲಕ ಇಲಾಖೆಯಲ್ಲಿ ಉತ್ತಮ ಹೆಸರು ಗಳಿಸಿದ್ದರು. ಹಾಗೂ ಜನರ ಪ್ರೀತಿಗೆ ಪಾತ್ರರಾಗಿದ್ದರು.
ಇದೀಗ ಬಂಟ್ವಾಳ ಉಪವಿಭಾಗಕ್ಕೆ ಪ್ರಭಾರ ಸ್ವೀಕಾರಿಸಿದ್ದಾರೆ. ಈ ಸಂದರ್ಭದಲ್ಲಿ ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರು ಹೂಗುಚ್ಚ ನೀಡಿ ಸ್ವಾಗತಿಸಿದರು.