ಉಡುಪಿ, ಜ 07 (DaijiworldNews/SM): ಬುಧವಾರದಂದು ಕಾರ್ಮಿಕ ಸಂಘಟನೆಗಳು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದು, ರಾಜ್ಯದಲ್ಲಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಮೆರವಣಿಗೆ ಅವಕಾಶ ಇಲ್ಲ ಅಂತ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ರಾಜ್ಯಾದ್ಯಂತ ಬಂದೋಬಸ್ತ್ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಕ್ರಮ ಕೈಗೊಂಡಿದ್ದೇವೆ. ದಿನನಿತ್ಯದ ಚಟುವಟಿಕೆಗೆ ಸಮಸ್ಯೆ ಇಲ್ಲ. ಬಂದ್ ಇರೋದಿಲ್ಲ, ಅಗತ್ಯ ವಸ್ತುಗಳು ಸಿಗುತ್ತವೆ. ಶಾಲಾ ಕಾಲೇಜುಗಳು ತೆರೆದಿರುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ನೆರೆ ಪರಿಹಾರ ವಿತರಣೆಯಾಗುತ್ತಿದೆ. ಕೇಂದ್ರದ ಎನ್ ಡಿಆರ್ ಎಫ್ ನಿಂದ ದೊಡ್ಡ ಪ್ರಮಾಣದ ಮೊತ್ತ ಬಂದಿದೆ. ಮನಮೋಹನ್ ಸಿಂಗ್ ಗೆ 14 ಸಾವಿರ ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದೆವು. 1,400 ಕೋಟಿ ಪರಿಹಾರ ಕೊಟ್ಟಿದ್ದರು. ಯುಪಿಎ ಸರಕಾರ ಇದ್ದಾಗ ಕೊಟ್ಟ ಹಣವನ್ನು ಅಸೆಂಬ್ಲಿಯಲ್ಲಿ ಹೇಳುತ್ತೇವೆ. ರಾಜಕಾರಣ ಮಾಡೋದಕ್ಕೆ ಕೆಲವರು ಕೆಲವು ಹೇಳಿಕೆ ಕೊಡುತ್ತಿದ್ದಾರೆ ಎಂಬುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಅಮಿತ್ ಶಾ ಮಂಗಳೂರು ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತವಾಗುತ್ತಿದ್ದು ಈ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಕೇಂದ್ರ ಗೃಹ ಸಚಿವರಿಗೆ ವಿರೋಧ ಮಾಡೋದು ಪ್ರಜಾಪ್ರಭುತ್ವ ವಿರೋಧಿ ನಿಲುವು ಎಂದಿದ್ದಾರೆ.ಅಮಿತ್ ಶಾ ನಮ್ಮ ರಾಷ್ಟ್ರದ ನಾಯಕರು. ನಮ್ಮ ಜಿಲ್ಲೆಗೆ ಅವರು ಬರಲೇಬೇಕು ಬರುತ್ತಾರೆ. ಕಾಂಗ್ರೆಸ್ ಪ್ರಜಾಪ್ರಭುತ್ವ ವಿರೋಧಿ ನಿಲುವು ವ್ಯಕ್ತಪಡಿಸುತ್ತಿದೆ ಎಂದರು. ಇನ್ನು ಐವನ್ ಡಿಸೋಜ ಉಪವಾಸ ಮಾಡಲಿ. ಉಪವಾಸ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೇದು ಅಂತ ಲೇವಡಿ ಮಾಡಿದರು