ಮಂಗಳೂರು, ಜ 8 (Daijiworld News/MB) : ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ದೇಶವ್ಯಾಪ್ತಿ ಕಾರ್ಮಿಕ ಸಂಘಟನೆಗಳು ಮುಷ್ಕರಕ್ಕೆ ಕರೆನೀಡಿದ್ದು ಈ ಹಿನ್ನಲೆಯಲ್ಲಿ ನಗರದ ಪುರಭವನದ ಮುಂದೆ ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಿದೆ.
ಒಟ್ಟು 14 ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು ಪುರಭವನದ ಮುಂದೆ ಪ್ರತಿಭಟನೆ ನಡೆಸಿದ ಕಾರ್ಮಿಕರು ತಮ್ಮ ಬೇಡಿಕೆಗಳು ಈಡೇರಿಸುವಂತೆ ಆಗ್ರಹ ಮಾಡಿದ್ದಾರೆ.
ಈ ಪ್ರತಿಭಟನೆಯಲ್ಲಿ ಹಳೆ ಬಂದರು ಸಗಟು ಮಾರುಕಟ್ಟೆಯ ಹಮಾಲಿ ಕಾರ್ಮಿಕರು ಭಾಗವಹಿಸಿದ್ದು ಬೆಂಬಲ ಸೂಚಿಸಿದ್ದು ಬಂದರ್ ಮಾರುಕಟ್ಟೆ ಬಂದ್ ಆಗಿದೆ.