ಕಾರ್ಕಳ, ಜ 26: ಸರಕಾರ ಇದೀಗ ಮುಸ್ಲಿಮರ ಮೇಲಿರುವ ಕೇಸುಗಳನ್ನು ವಾಪಸು ಪಡೆಯುವಂತೆ ಸುತ್ತೋಲೆ ಹೊರಡಿಸಿರುವುದು ಅಲ್ಪಸಂಖ್ಯಾತರ ತುಷ್ಟೀಕರಣದ ಪರಾಕಾಷ್ಠೆಯಾಗಿದೆ ಎಂದು ಶಾಸಕ ವಿ. ಸುನೀಲ್ಕುಮಾರ್ ಪ್ರಕಟಣೆಯೊಂದರಲ್ಲಿ ಆರೋಪಿಸಿದ್ದಾರೆ.
2014 ರಲ್ಲಿ ಎಲ್ಲಾ ಕೆ.ಎಫ್.ಡಿ ಕಾರ್ಯಕರ್ತರ ಕೇಸುಗಳನ್ನು ಹಿಂಪಡೆದ ನಂತರ ರಾಜ್ಯದಲ್ಲಿ ಎಲ್ಲಾ ಕಡೆ ಗಲಭೆಗಳು ನಡೆದಿದ್ದವು. ಇದೀಗ ಕ್ರಿಮಿನಲ್ ಹಿನ್ನೆಲೆ ಇರುವವರ ಮೇಲಿರುವ ಕೇಸುಗಳನ್ನು ಮುಗ್ದರು ಎಂದು ವ್ಯಾಖ್ಯಾನಿಸಿ ಏಕಾಏಕಿ ಕೇಸು ಹಿಂಪಡೆಯುವ ಕಾರ್ಯಕ್ಕೆ ತೊಡಗಿರುವುದು ರಾಜ್ಯದಲ್ಲಿ ಮತ್ತೊಮ್ಮೆ ಗಲಭೆ ನಡೆಸುವ ಹುನ್ನಾರವಾಗಿದೆ. ಸರಕಾರ ಇದೀಗ ಕೇಸು ಹಿಂಪಡೆದು ಮತ್ತೊಂದು ಸುತ್ತಿನ ಗಲಭೆ ನಡೆಸಲು ಪರೋಕ್ಷವಾಗಿ ವೇದಿಕೆ ಸಿದ್ದ ಪಡಿಸುತ್ತಿದೆ ಎಂದು ಹೇಳಿದ್ದಾರೆ.
ರಾಜ್ಯ ಸರಕಾರಕ್ಕೆ ಹಿಂದುಗಳನ್ನು ಅವಹೇಳನ ಮಾಡುವುದು, ಹೀಯಾಳಿಸುವುದು, ಅಪಮಾನಿಸುವುದು, ಹಿಂದು ಕಾರ್ಯಕರ್ತರನ್ನು ಹತ್ತಿಕ್ಕುವುದು, ತುಚ್ಚವಾಗಿ ಕಾಣುವುದು ಈ ಸರಕಾರದ ಆದ್ಯತೆಯಾಗಿದೆ. ಇದನ್ನು ಕರ್ನಾಟಕದ ಜನತೆ ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು ಎಂದು ತಿಳಿಸಿದ್ದಾರೆ.
ಪ್ರಶಾಂತ್ ಪೂಜಾರಿ, ಕುಟ್ಟಪ್ಪ, ರುದ್ರೇಶ್, ದೀಪಕ್ ರಾವ್ ಮೊದಲಾದ ಹಿಂದು ಕಾರ್ಯಕರ್ತರ ಸರಣಿ ಹಂತಕರ ಮೇಲಿನ ಕೇಸು ವಾಪಸು ಪಡೆದು, ಅವರನ್ನು ಜೈಲಿನಿಂದ ಹೊರತಂದು ರಾಜ್ಯದಲ್ಲಿ ಮತ್ತೊಮ್ಮೆ ಗಲಭೆ ನಡೆಸುವ ಹುನ್ನಾರವನ್ನು ಸಸರ್ಕಾರ ಮಾಡುತ್ತಿದೆ. ಸರಕಾರ ಈ ನಿರ್ಧಾರದಿಂದ ಕೂಡಲೇ ಹಿಂದೆ ಸರಿಯುವಂತೆ ಅವರು ಆಗ್ರಹಿಸಿದ್ದಾರೆ.