ಮಂಗಳೂರು, ಜ 27: ಜಯಕಿರಣ ಲಾಂಛನದಡಿ ಪ್ರಕಾಶ್ ಪಾಂಡೇಶ್ವರ ನಿರ್ಮಾಣದಲ್ಲಿ, ವೀರೇಂದ್ರ ಶೆಟ್ಟಿ ಕಾವೂರ್ ನಿರ್ದೇಶನದಲ್ಲಿ ಮೂಡಿ ಬಂದ ಚಾಲಿಪೋಲಿಲು ಸಿನಿಮಾ ತುಳು ಚಿತ್ರರಂಗದ ಚರಿತ್ರೆಯಲ್ಲಿ ಇತಿಹಾಸ ಬರೆದಿದೆ.
ತುಳು ಚಿತ್ರರಂಗದ ಇತಿಹಾಸದಲ್ಲಿ ದಾಖಲೆಯ 511 ದಿನದ ಪ್ರದರ್ಶನ ಕಂಡ ಚಾಲಿಪೋಲಿಲು ಚಿತ್ರವು, ಪರ ಭಾಷಾ ಸಿನಿಮಾ ರಂಗದವರು ತುಳು ಚಿತ್ರರಂಗದೆಡೆ ತಿರುಗಿ ನೋಡುವಂತೆ ಮಾಡಿದ ಸೂಪರ್ ಡೂಪರ್ ಹಿಟ್ ಚಿತ್ರವಾಗಿದೆ. ಇದೀಗ ಚಾಲಿಪೋಲಿಲು ಮತ್ತೊಂದು ಹೊಸ ದಾಖಲೆ ನಿರ್ಮಿಸಿದೆ.
ಕೆಲ ದಿನದ ಹಿಂದೆಯಷ್ಟೆ ಬಹು ಜನರ ಒತ್ತಾಯದ ಮೇರೆಗೆ ಕೇರಳದ ಕಂಪನಿಯೊಂದು ಚಾಲಿಪೋಲಿಲು ಚಿತ್ರದ ಡಿಜಿಟಲ್ ರೈಟ್ಸನ್ನು ಬಹು ಮೊತ್ತಕ್ಕೆ ಖರೀದಿಸಿ ಯೂಟ್ಯೂಬಿನಲ್ಲಿ ಹರಿಬಿಟ್ಟಿತ್ತು.
ಚಾಲಿಪೋಲಿಲು ಚಿತ್ರ ಬಿಡುಗಡೆಯಾದ ಕೇವಲ ಕೆಲವೇ ದಿನದಲ್ಲಿ 10 ಲಕ್ಷ ವೀಕ್ಷಣೆ ಪಡೆದು ತುಳು ಚಿತ್ರರಂಗದ ಇತಿಹಾಸದಲ್ಲಿ ಅತಿ ವೇಗದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಪಡೆದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಾರೆ, ತುಳುಚಿತ್ರರಂಗದಲ್ಲಿ ಭರ್ಜರಿ ಪ್ರದರ್ಶನ ಕಂಡು ಚಿತ್ರ ರಸಿಕರ ಮನಗೆದ್ದು ಸಕ್ಸಸ್ ಆಗಿದ್ದ ಸಿನಿಮಾ ಇದೀಗ ಯೂಟ್ಯೂಬ್ ನಲ್ಲೂ ಕಮಾಲ್ ಮಾಡಿರುವುದು ಸಂತಸದ ಸಂಗತಿ.