ಬಂಟ್ವಾಳ, ಜ.12 (Daijiworld News/PY) : ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪ ಪಿಕಪ್ ವಾಹನವೊಂದರಲ್ಲಿ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ವಾಹನ ಸಹಿತ ಆರೋಪಿಯೋರ್ವನನ್ನು ಬಂಟ್ವಾಳ ವಲಯದ ಅರಣ್ಯಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಪಿಕಪ್ ವಾಹನ ಚಾಲಕ ಐವನ್ ಅರುಣ್ ಮಿನೇಜಸ್ ಎಂಬಾತನ್ನು ಬಂಧಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.
ಆರೋಪಿಯಿಂದ ಸುಮಾರು 3 ಲಕ್ಷ ರೂ. ಮೌಲ್ಯ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ವಲಯ ಅರಣ್ಯಾಧಿಕಾರಿ ಬಿ.ಸುರೇಶ್, ಉಪ ಅರಣ್ಯಾಧಿಕಾರಿ ಯಶೋಧರ, ಅರಣ್ಯ ರಕ್ಷಕರಾದ ಜೀತೇಶ್ ಪಿ., ದಯಾನಂದ, ವಿನಯ್ ಕುಮಾರ್, ವೀಕ್ಷಕ ಪ್ರವೀಣ್ ಕಾರ್ಯಚರಣೆ ಪಾಲ್ಗೊಂಡಿದ್ದರು.
ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಡಿಸಿಎಫ್ ಕರಿಕಲನ್ ಅವರ ಮಾರ್ಗದರ್ಶನದಲ್ಲಿ ಎಸಿಎಫ್ ಶಂಕರೇ ಗೌಡ ಅವರು ಮುಂದಿನ ತನಿಖೆ ನಡೆಸುತ್ತಿದ್ದಾರೆ.