ಬಂಟ್ವಾಳ ಜ 28 : ಇಲ್ಲಿನ ತುಂಬೆ ಬಳಿಯ ನೇತ್ರಾವತಿ ನದಿಗೆ ಈಜಲು ಹೋದ ಯುವಕರಿಬ್ಬರು ನೀರು ಪಾಲಾದ ಘಟನೆ ಜ 28 ರ ಭಾನುವಾರ ತುಂಬೆಯಲ್ಲಿ ನಡೆದಿದೆ. ನೀರು ಪಾಲಾದ ಯುವಕರನ್ನು ತುಂಬೆ ನಿವಾಸಿ ಸುಲೈಮಾನ್ ಅವರ ಮಗ ಸವಾದ್ ( 30) ಮತ್ತು ಮಾರಿಪಳ್ಳ ನಿವಾಸಿ ಇಬ್ರಾಹಿಂ ಅವರ ಮಗ ರಮ್ಲಾನ್ ಎಂದು ಗುರುತಿಸಲಾಗಿದೆ. ಇದರಲ್ಲಿ ಓರ್ವ ನ ಮೃತದೇಹ ಪತ್ತೆಯಾಗಿದ್ದು ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ರಜೆಯಾದರಿಂದ ಒಟ್ಟು 9 ಮಂದಿ ಸ್ನೇಹಿತರು ಸೇರಿ ನೇತ್ರಾವತಿ ನದಿಗೆ ಈಜಲು ಹೋಗಿದ್ದರು. ಬಂಟ್ವಾಳ ಗ್ರಾಮಾಂತರ ಪೋಲಿಸರು ಹಾಗೂ ಸ್ಥಳೀಯ ಮುಳುಗು ತಜ್ಞರ ನೆರವಿನೊಂದಿಗೆ ಹುಡುಕಾಟ ನಡೆಸುತ್ತಿದ್ದಾರೆ.