ಕುಂದಾಪುರ, ಜ 13 (Daijiworld News/MSP): ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳ ಸಚಿವಾಲಯದ ಅಧ್ಯಯನ ತಂಡ ಜ.13ರಂದು ವಂಡ್ಸೆ ಗ್ರಾಮ ಪಂಚಾಯತ್ನ ಎಸ್.ಎಲ್.ಆರ್.ಎಂ. ಘಟಕಕ್ಕೆ ಭೇಟಿ ನೀಡಿತು. ನೇಪಾಳದ ಬಿರೇಂದ್ರ ನಗರದ ಪುರಸಭೆ ವ್ಯಾಪ್ತಿಯಲ್ಲಿ ಎಸ್.ಎಲ್.ಆರ್.ಎಂ. ಘಟಕವನ್ನು ಇದೇ ಮಾದರಿಯಲ್ಲಿ ಪೈಲೆಟ್ ಪ್ರಾಜೆಕ್ಟ್ ಆಗಿ ಆರಂಭಿಸುವ ಉದ್ದೇಶದಿಂದ ಅಧ್ಯಯನ ತಂಡ ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.



ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮನೆಗಳು ಹಾಗೂ ಅಂಗಡಿ-ಮುಂಗಟ್ಟುಗಳ ಕಸವನ್ನು ಸಂಗ್ರಹಿಸುವುದರ ಜೊತೆಗೆ ನಗರ ಸ್ವಚ್ಛತೆ, ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡುವುದು, ಹಸಿ ಕಸವನ್ನು ಗೊಬ್ಬರವನ್ನಾಗಿಸುವುದು, ಗೋಶಾಲೆ, ಕಸ ವಿಂಗಡಣೆಯ ದಾಖಲಾತಿ ನಿರ್ವಹಣೆ, ಘಟಕ ನಿರ್ವಹಣೆ, ಲಾಭಂಶ ಇತ್ಯಾದಿಗಳನ್ನು ಗಮನಿಸಿದರು. ವಂಡ್ಸೆ ಎಸ್.ಎಲ್.ಆರ್.ಎಂನಲ್ಲಿ ವಂಡ್ಸೆ ಗ್ರಾ.ಪಂ. ಮಾತ್ರವಲ್ಲದೆ ಚಿತ್ತೂರು, ಇಡೂರು -ಕುಂಜ್ಞಾಡಿ ಗ್ರಾ.ಪಂ.ಗಳ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ.
ನೇಪಾಳ ಸರ್ಕಾರದ ಫೆಡರಲ್ ವ್ಯವಹಾರಗಳ ಸಚಿವಾಲಯದ ಜಂಟೀ ಕಾರ್ಯದರ್ಶಿ ಕೇದಾರ್ ಪ್ರಸಾದ್ ಪನೆರು, ಆಂತರಿಕ ಕಾರ್ಯದರ್ಶಿ ರಿಷಿ ರಾಜ್ ಆಚಾರ್ಯ, ಮಹೇಂದ್ರ ಕುಮಾರ್ ಸಪ್ಕೋಟ, ಕೈಗಾರಿಕೆ ಮತ್ತು ವಾಣಿಜ್ಯ ವಿಭಾಗದ ಆಂತರೀಕ ಕಾರ್ಯದರ್ಶಿ ಜ್ಞಾನೇಂದ್ರ ಪರಜುಲಿ, ಅರಣ್ಯ ಮತ್ತು ಪರಿಸರ ಸಚಿವಾಲಯದ ಮೆಕ್ಯಾನಿಕಲ್ ಇಂಜಿನಿಯರ್ ತುಳ್ಸಿ ನಾರಾಯಣ್ ಮಹಾರಾಜನ್, ನಗರ ಅಭಿವೃದ್ದಿ ಸಚಿವಾಲಯದ ಸಿವಿಲ್ ಇಂಜಿನಿಯರ್ ಪ್ರಬಿನ್ ಶ್ರೇಸ್ತಾ, ಬಿರೇಂದ್ರನಗರ್ ಪುರಸಭೆ ಮೆಯರ್ ದೇವ್ ಕುಮಾರ್ ಸುಬೆದಿ,ಬಿರೇಂದ್ರನಗರ್ ಪುರಸಭೆ ಅಧಿಕಾರಿ ಯಮ್ಲಾ ಗಿರಿ, ಸೊಲುದುಖುಂದ ಪುರಸಭೆ ಉಪ ಮೇಯರ್ ಕಲ್ಪನಾ ರೈ, ಮುಖ್ಯಾಧಿಕಾರಿ ಐಷಾ ಖಾಟೂನ್, ಯೋಜನಾ ಮೆನೇಜರ್ ಸಕಿನಾ ಖಾಟೂನ್ ಅಧ್ಯಯನ ತಂಡದಲ್ಲಿ ಇದ್ದರು.
ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಗ್ರೀನ್ ಇಂಡಿಯಾ ಸರ್ವೀಸ್ನ ಯೋಜನಾ ನಿರ್ದೇಶಕ ವೆಲ್ಲೂರು ಶ್ರೀನಿವಾಸನ್ ಎಸ್.ಎಲ್.ಆರ್.ಎಂ. ಬಗ್ಗೆ ಮಾಹಿತಿ ನೀಡಿದರು. ಉಡುಪಿ ಜಿ.ಪಂನ ಸಹಾಯಕ ಯೋಜನಾ ಅಧಿಕಾರಿ ಜೆಮ್ಸ್ ಡಿಸಿಲ್ವಾ, ಕುಂದಾಪುರ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್, ಸಂಯೋಜಕರಾದ ಸೂರಜ್, ಗ್ರಾ.ಪಂ.ಉಪಾಧ್ಯಕ್ಷೆ ಶಾರದಾ ರುದ್ರಯ್ಯ ಆಚಾರ್ಯ, ಸದಸ್ಯರಾದ ಉದಯ ಕೆ.ನಾಯ್ಕ್, ಸಿಂಗಾರಿ, ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ರೂಪಾ ಗೋಪಿ, ಕಾರ್ಯದರ್ಶಿ ಶಂಕರ ಆಚಾರ್ಯ, ಎಸ್.ಎಲ್.ಆರ್.ಎಂ.ಮೇಲ್ವಿಚಾರಕಿ ವಿಜಯಲಕ್ಷ್ಮೀ, ಪಿಡಿಓಗಳಾದ ದಯಾನಂದ, ಮಹೇಶ ಕಾಡೂರು, ಸ್ಥಳೀಯರಾದ ಮಹಮ್ಮದ್ ರಫೀಕ್, ದಿವಾಕರ, ಗ್ರಾ.ಪಂ.ಸಿಬ್ಬಂದಿಗಳು ಉಪಸ್ಥಿತರಿದ್ದರು. ನಂತರ ನೇಪಾಳದ ಅಧ್ಯಯನ ತಂಡ ಸ್ವಾವಲಂಬನಾ ಕೇಂದ್ರಕ್ಕೆ ಭೇಟಿ ನೀಡಿದರು.