ಮಂಗಳೂರು, ಜ 28 : ‘ದೀಪಕ್ ರಾವ್ ಕೊಲೆಗೆ ಪ್ರತೀಕಾರವಾಗಿ ಬಶೀರ್ ಅವರ ಕೊಲೆ ನಡೆದಿದೆ. ಇದರಿಂದ ನಮಗೆ ಚಿಂತೆ ಏನೂ ಇಲ್ಲ’ ಎಂದು ಮಂಗಳೂರಿನಲ್ಲಿ ವಿಎಚ್ಪಿ ಜಿಲ್ಲಾ ಘಟಕದ ಅಧ್ಯಕ್ಷ ಜಗದೀಶ್ ಶೇಣವ ಹೇಳಿದ್ದಾರೆ. ಅವರು ನಗರದಲ್ಲಿ ಟಿ ವಿ ರಮಣ ಪೈ ಹಾಲ್ ನಲ್ಲಿ ಜ. 28 ರ ಭಾನುವಾರ ನಡೆದ ಹಡೆದವ್ವನ ಶಾಪ ಕೃತಿ ಬಿಡುಗಡೆ ಸಮಾರಂಭದಲ್ಲಿ ಈ ಹೇಳಿಕೆ ನೀಡಿದ್ದಾರೆ. ದೀಪಕ್ ರಾವ್ ಅಮಾಯಕನಾಗಿದ್ದು, ಹತ್ಯೆಯ ಪ್ರತಿಕಾರವಾಗಿ ಬಶೀರ್ ಕೊಲೆಯಾಗಿದೆ.
ಹಿಂದುಗಳ ರಕ್ಷಣೆಗೆ ಒಂದು ವರ್ಗ ತಯಾರಾಗಿದ್ದು ಸಮಾಜ ರೊಚ್ಚಿಗೆದ್ದಿದೆ. ಹೀಗಾಗಿ ಪ್ರತಿಕಾರವಾಗಿ ಬಶೀರ್ ಅವರ ಕೊಲೆ ನಡೆದಿದೆ ಎಂದರು. ಹಡೆದವ್ವನ ಶಾಪ ಕೃತಿಯೂ ಕೋಮು ಗಲಭೆಗಳ ವೇಳೆ ಬಲಿಯಾದವರ ಪೋಷಕರು ಸರ್ಕಾರಕ್ಕೆ ಬರೆದ ಪತ್ರಗಳನ್ನು ಈ ಪುಸ್ತಕ ಒಳಗೊಂಡಿದೆ.