ಕಾಸರಗೋಡು, ಜ.14 (Daijiworld News/PY) : ಎಸ್ಡಿಪಿಐ ಮತ್ತು ಮುಸ್ಲಿಂ ಲೀಗ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದು, ಇಬ್ಬರು ಇರಿತಕ್ಕೊಳಗಾದ ಘಟನೆ ಜ.13 ಮಂಗಳವಾರ ರಾತ್ರಿ ಎಡನೀರನಲ್ಲಿ ನಡೆದಿದೆ.

ಇರಿತದಿಂದ ಗಂಭೀರ ಗಾಯಗೊಂಡವರನ್ನು ಆಶಿಫ್ (25) ಮತ್ತು ರಶೀದ್ (28) ಎಂದು ಗುರುತಿಸಲಾಗಿದ್ದು, ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೋಸ್ಟರ್ ಲಗತ್ತಿಸುವ ಕುರಿತ ವಿಚಾರ ಘಟನೆಗೆ ಕಾರಣ ಎನ್ನಲಾಗಿದೆ. ಲಗತ್ತಿಸಿದ ಪೋಸ್ಟರ್ ಹರಿದ ಕಾರಣ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದು ಘರ್ಷಣೆಗೆ ತಿರುಗಿದೆ ಎನ್ನಲಾಗಿದೆ. ಈ ಸಂದರ್ಭ ಇಬ್ಬರು ಇರಿತಕ್ಕೊಳಗಾಗಿದ್ದಾರೆ.
ಘಟನೆಯ ಸಂದರ್ಭ ಇರಿತಕ್ಕೊಳಗಾದವರು ಎಸ್ಡಿಪಿಐ ಕಾರ್ಯಕರ್ತರು ಎಂದು ತಿಳಿದು ಬಂದಿದೆ .
ಈ ಬಗ್ಗೆ ಮಾಹಿತಿ ತಿಳಿದ ವಿದ್ಯಾನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.