ಕಾಸರಗೋಡು, ಜ 14 (Daijiworld News/MSP): ದೇವಸ್ಥಾನಕ್ಕೆ ನುಗ್ಗಿದ ಕಳ್ಳರು ಭಾರೀ ಕಳ್ಳತನ ನಡೆಸಿದ ಘಟನೆ ಕಾಞ೦ಗಾಡ್ ನಲ್ಲಿ ನಡೆದಿದೆ.
ಕಾಞ೦ಗಾಡ್ ಕಡಿ೦ಞತ್ತೂರು ಶ್ರೀ ಮಹಾವಿಷ್ಣು ದೇಗುಲದಿಂದ ಕಳವು ನಡೆದಿದ್ದು , ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ. ಬೆಳಿಗ್ಗೆ ಅರ್ಚಕರು ಪೂಜೆ ಸಲ್ಲಿಸಲು ತಲಪಿದಾಗ ಕೃತ್ಯ ಬೆಳಕಿಗೆ ಬಂದಿದೆ. ದೇಗುಲದ ಹಿಂಬದಿಯ ಮಾಡಿನ ಹಂಚು ತೆಗೆದು ಒಳನುಗ್ಗಿ ಕೃತ್ಯ ನಡೆಸಿದ್ದಾರೆ.
ದೇವರ ವಿಗ್ರಹಕ್ಕೆ ಸಮರ್ಪಿಸಿದ್ದ ಚಿನ್ನದ ಕಿರೀಟ ಸೇರಿದಂತೆ 20 ಪವನ್ ಆಭರಣ ಕಳವು ಮಾಡಲಾಗಿದೆ. ಕಾಣಿಕೆ ಡಬ್ಬಿ ಒಡೆದು ಕಳವು ನಡೆಸಿದ್ದ, ನಾಣ್ಯಗಳು ಸಮೀಪ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡು ಬಂದಿದೆ. ಪೊಲೀಸರು ಸ್ಥಳಕ್ಕೆ ತಲಪಿದ್ದು ತನಿಖೆ ನಡೆಸುತ್ತಿದ್ದಾರೆ ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಆರಂಭಿಸಿದ್ದಾರೆ.