ಶಿವಮೊಗ್ಗ ಜ 28: ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರ ಆತ್ಮಕಥೆ ’ ಸಾಲ ಮೇಳದ ಸಂಗ್ರಾಮ’ ಪುಸ್ತಕದ ವಿರುದ್ದ ಮಧು ಬಂಗಾರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಮಧು ಬಂಗಾರಪ್ಪ, ಜನಾರ್ದನ ಪೂಜಾರಿ ನನ್ನ ತಂದೆ, ಎಸ್ ಬಂಗಾರಪ್ಪ ತೇಜೋವಧೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದಿರಾ ಗಾಂಧಿಯವರನ್ನು ತನ್ನ ತಂದೆ ಹೊಡೆಯಲು ಮುಂದಾಗಿದ್ದರು ಎನ್ನುವುದು ಸುಳ್ಳಿನ ಕಂತೆಯಾಗಿದ್ದು ಇದು ನಂಬಲಾರ್ಹವಾಗಿಲ್ಲ. ಅವರ ಈ ಪುಸ್ತಕವೂ ದಾರಿದೀಪವಾಗಿರಬೇಕೇ ಹೊರತು, ದಾರಿ ತಪ್ಪಿಸುವಂತಿರಬಾರದು ಎಂದು ಹೇಳಿದರು.
ಬಂಗಾರಪ್ಪ ಹಲ್ಲೆ ನಡೆಸಲು ಮುಂದಾಗಿದ್ದರೆ, ರಾಜೀವ್ ಗಾಂಧಿ ಬಳಿಕ ತಂದೆಯವರನ್ನು ಮುಖ್ಯಮಂತ್ರಿ ಮಾಡುತ್ತಿರಲಿಲ್ಲ. ಜನಾರ್ಧನ ಪೂಜಾರಿವರ ಸಾಲ ಮೇಳದ ಸಂಗ್ರಾಮ ಪುಸ್ತಕ ಆತ್ಮ ಚರಿತ್ರೆಯಲ್ಲ ಪಾಪದ ಕೊಡ ಎಂದು ಕಿಡಿಕಾರಿದರು.