ಮಂಗಳೂರು, ಜ 14 (Daijiworld News/MSP): ಎನ್ಆರ್ಸಿ, ಸಿಎಎ ವಿರುದ್ದ ಅಡ್ಯಾರ್ ನ ಕಣ್ಣೂರಿನ ಶಹಾ ಗಾರ್ಡನ್ ಮೈದಾನದಲ್ಲಿ ಜ.15 ರ ಬುಧವಾರ ನಡೆಯಲಿರುವ ಬೃಹತ್ ಪ್ರತಿಭಟನಾ ಸಮಾವೇಶದ ಹಿನ್ನಲೆಯಲ್ಲಿ ಜನವರಿ 15 ರ ಬುಧವಾರ ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಜಾರಿಯಲ್ಲಿರುವ ಸಂಚಾರ ತಿರುವು ರಸ್ತೆ ಸಂಚಾರದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಬಿಸಿ ರೋಡ್ ನಿಂದ ಮಂಗಳೂರಿಗೆ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.
* ಉಡುಪಿ ಕಡೆಯಿಂದ ಬೆಂಗಳೂರು ಕಡೆಗೆ ಸಾಗುವ ವಾಹನಗಳು ಪಡುಬಿದ್ರಿಯಲ್ಲಿ ತಿರುವು ಪಡೆದು ಕಾರ್ಕಳ-ಧರ್ಮಸ್ಥಳ ಮೂಲಕ ಶಿರಾಡಿ ಘಾಟ್ ನಲ್ಲಿ ಪ್ರಯಾಣಿಸಬೇಕು.
* ಬೆಂಗಳೂರುಕಡೆಯಿಂದ ಮಂಗಳೂರಿಗೆ ಬರುವ ವಾಹನಗಳು ಕೊಣಾಜೆ-ತೊಕ್ಕೊಟ್ಟು ಮೂಲಕ ಮೆಲ್ಕಾರ್-ಬಿ.ಸಿರೋಡ್ ನಲ್ಲಿ ತಿರುಗಿ ಮಂಗಳೂರು ನಗರಕ್ಕೆ ಪ್ರವೇಶಿಸಬಹುದು.
* ಮಂಗಳೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವ ವಾಹನಗಳು ನಂತೂರಿನಲ್ಲಿ ತಿರುವು ಪಡೆದು ಪಂಪ್ವೆಲ್-ತೊಕ್ಕೊಟ್ಟು-ಕೊಣಾಜೆ-ಬಿ.ಸಿ ರೋಡ್ ಮೂಲಕ ಸಾಗಬೇಕು
* ಬಿ.ಸಿರೋಡ್ ನಿಂದ ಮಂಗಳೂರಿಗೆ ಬರುವ ವಾಹನಗಳು ಪೊಳಲಿ- ಕೈಕಂಬ ಮೂಲಕ ಪ್ರಯಾಣಿಸಬಹುದು
ರಸ್ತೆ ಸಂಚಾರದಲ್ಲಿ ಬದಲಾವಣೆ ಮಾಡಿರುವ ಕಾರಣ ಮಂಗಳೂರು ನಗರದ ಪೊಲೀಸ್ ಆಯುಕ್ತರು ಸಾರ್ವಜನಿಕರ ಸಂಪೂರ್ಣ ಸಹಕಾರವನ್ನು ಕೋರಿದ್ದಾರೆ.
ಇನ್ನು ಸಮಾವೇಶದಲ್ಲಿ ಭಾಗವಹಿಸಲಿಚ್ಚಸುವ ಸಾರ್ವಜನಿಕರ ವಾಹನಗಳನ್ನು ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
* ಸಮಾವೇಶದಲ್ಲಿ ಪಾಲ್ಗೊಳ್ಳಲು ಮಂಗಳೂರಿನಿಂದ ಬರುವ ಎಲ್ಲಾ ದ್ವಿಚಕ್ರ ವಾಹನಗಳನ್ನು ಜಾಗ್ವಾರ್ ಶೋ ರೂಂ ಮುಂದಿನ ಮೈದಾನದಲ್ಲಿ ನಿಲ್ಲಿಸಬೇಕು
* ಮಂಗಳೂರಿನಿಂದ ಬರುವ ಎಲ್ಲಾ ಕಾರುಗಳು ತಮ್ಮ ವಾಹನಗಳನ್ನು ಸೆಜೂರ್ ಬೀಡಿ ಮೈದಾನದಲ್ಲಿ ನಿಲ್ಲಿಸಲು ಸೂಚಿಸಲಾಗಿದೆ.
* ಮಂಗಳೂರು ಮತ್ತು ಬಿ.ಸಿ ರೋಡ್ ನಿಂದ ಬರುವ ಎಲ್ಲಾ ಬಸ್ಗಳನ್ನು ಮೊಹತಿಶಾಮ್ ಮೈದಾನದಲ್ಲಿ ಪಾರ್ಕ್ ಮಾಡಬೇಕಾಗಿದೆ
* ಬಿ.ಸಿ ರೋಡ್ ನಿಂದ ಬರುವ ಎಲ್ಲಾ ದ್ವಿಚಕ್ರ ವಾಹನಗಳನ್ನು ಕಾಂಬ್ಲಿ ಮೈದಾನದಲ್ಲಿ ನಿಲ್ಲಿಸಬೇಕು
* ಬಿ.ಸಿ ರೋಡ್ ನಿಂದ ಬರುವ ಎಲ್ಲಾ ಕಾರುಗಳು ಮತ್ತು ಇತರ ನಾಲ್ಕು ಚಕ್ರ ವಾಹನಗಳನ್ನು ಅಡ್ಯಾರ್ ಕಟ್ಟೆ ಜುಮ್ಮಾ ಮಸೀದಿ ಮೈದಾನದಲ್ಲಿ ನಿಲ್ಲಿಸಬೇಕು
* ಎಲ್ಲಾ ಪೊಲೀಸ್ ಮತ್ತು ತುರ್ತು ವಾಹನಗಳನ್ನು ವೆಲ್ ರಿಂಗ್ ಪಾರ್ಕಿಂಗ್ ಮತ್ತು ಶಂಕರ್ ವಿಠಲ್ ಪಾರ್ಕಿಂಗ್ನಲ್ಲಿ ನಿಲ್ಲಿಸಲಾಗುವುದು
* ಬಿ.ಸಿ ರೋಡ್ ನಿಂದ ಮತ್ತು ಫರಂಗಿಪೇಟೆ ಕಡೆಯಿಂದ ಬರುವ ಬಸ್ಗಳನ್ನು ಹೆರಿಟೇಜ್ ಗ್ರೌಂಡ್ ಪಾರ್ಕಿಂಗ್ನಲ್ಲಿ ನಿಲ್ಲಿಸಬೇಕು