ನವದೆಹಲಿ ಜ 28 : ಇಲ್ಲಿನ ನಾಯರ್ ಆಸ್ಪತ್ರೆಯಲ್ಲಿ ಜ 27 ರ ಶನಿವಾರ ಸಂಜೆ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದಿಂದ , ಎಂಆರ್ಐ ಯಂತ್ರ ದೊಳಗೆ ಸೆಳೆದು 32 ವರ್ಷದ ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ರಾಜೇಶ್ ಎಂದು ಗುರುತಿಸಲಾಗಿದೆ. ತಾಯಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆತಂದಿದ್ದ ರಾಜೇಶ್ ಮಾರು ಎಂಬಾತ ಇನ್ನೋರ್ವ ರೋಗಿಗೆ ಸಹಾಯ ಮಾಡಲು ಮುಂದಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಅಮ್ಲಜನಕ ಸಿಲಿಂಡರ್ ಹಿಡಿದು ಎಂಆರ್ಐ ಯಂತ್ರವಿರುವ ಕೋಣೆಗೆ ಹೋಗಿದ್ದೆ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗಿದೆ. ಎಂಆರ್ಐ ಕೋಣೆಗೆ ಯಾವುದೇ ಲೋಹದ ವಸ್ತುವನ್ನು ಕೊಂಡೊಯ್ಯುವಂತಿಲ್ಲ. ಆದರೆ ಸಿಲಿಂಡರ್ ಹಿಡಿದಿದ್ದ ರಾಜೇಶ್ ನನ್ನು ಆಸ್ಪತ್ರೆಯ ಸಿಬ್ಬಂದಿ ಒಳಗೆ ಕರೆದಿದ್ದಾರೆ . ಇದರಿಂದಾಗಿ ಅಯಸ್ಕಾಂತೀಯ ಶಕ್ತಿಯಿಂದ ರಾಜೇಶ್ ನನ್ನು ಯಂತ್ರ ಒಮ್ಮೆಲೆ ಹೀರಿಕೊಂಡಿದೆ. ಹೀಗಾಗಿ ಯಂತ್ರಕ್ಕೆ ಸಿಲುಕಿ 2 ನಿಮಿಷಗಳ ಒಳಗೆ ರಾಜೇಶ್ ಪ್ರಾಣ ಪಕ್ಷಿ ಹಾರಿ ಹೋಗಿದೆ. ಇದಕ್ಕೆಲ್ಲದಕ್ಕೂ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂದು ರಾಜೇಶ್ ಸಂಬಂಧಿಕರು ಆರೋಪಿಸಿದ್ದಾರೆ.