ಮಂಗಳೂರು, ಜ 29: ದಕ್ಷಿಣ ಕನ್ನಡದ ನೂತನ ಎಸ್ಪಿ ಆಗಿ ಡಾ. ಬಿ.ಆರ್. ರವಿಕಾಂತೇ ಗೌಡ ಅವರು ಜ29ರ ಸೋಮವಾರ ಅಧಿಕಾರ ಸ್ವೀಕರಿಸಿದರು. ಜಿಲ್ಲೆಗೆ ನೂತನ ಎಸ್ಪಿಯಾಗಿ ರಾಜ್ಯ ಸರ್ಕಾರ ಜ. 20 ರಂದು ಆದೇಶವನ್ನು ಹೊರಡಿಸಿತ್ತು. ಪ್ರಸ್ತುತ ಅಧಿಕಾರದಲ್ಲಿದ್ದ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಬೆಳಗಾವಿಗೆ ವರ್ಗಾವಣೆ ಮಾಡಲಾಗಿದೆ. 2014 ರಿಂದ ಸುದೀರ್ಘ ಅವಧಿಯಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಡಾ. ಬಿ.ಆರ್. ರವಿಕಾಂತೇ ಗೌಡ ಅವರು ಪ್ರಸಿದ್ದ ಬರಹಗಾರ ಬೆಸಗರಹಳ್ಳಿ ರಾಮಣ್ಣ ಅವರ ಪುತ್ರ. ಹಿಂದುಸ್ತಾನ್ ಸಂಗೀತದಲ್ಲಿ ಒಲವು ಹೊಂದಿರುವ ರವಿಕಾಂತೇ ಗೌಡ ಸಾಹಿತ್ಯದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.