ಕೊಣಾಜೆ,ಸೆ16: ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದ ಆರೋಪದಡಿ ಸಹೋದರ ಸಂಬಂಧಿ ಸೇರಿದಂತೆ ಇಬ್ಬರನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ತಿಮ್ಮಪ್ಪ ಪೂಜಾರಿ ಮತ್ತು ಬಾಲಕಿಯ ಸಹೋದರ ಸಂಬಂಧಿ ದಯಾನಂದ ಬಂಧಿತ ಆರೋಪಿಗಳು.
ಬೆಳ್ಮಗ್ರಾಮದ ರೆಂಜಾಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಬಾಲಕಿಯನ್ನು ಕೂಲಿ ಕೆಲಸ ಮಾಡುತ್ತಿದ್ದ ತಿಮ್ಮಪ್ಪ ಕಳೆದ ಮೂರು ವರ್ಷಗಳಿಂದ ಲೈಂಗಿಕವಾಗಿ ಬಳಸುತ್ತಿದ್ದು, ಒಂದು ಬಾರಿ ಬಾಲಕಿ ಗರ್ಭಿಣಿಯಾಗಿದ್ದಳು. ಕಳೆದ ಎರಡು ವರ್ಷಗಳಿಂದ ಬಾಲಕಿಯ ಸಹೋದರ ಸಂಬಂಧಿ ದಯಾನಂದ್ ಅತ್ಯಾಚಾರ ನಡೆಸಿದ್ದು, ಬಾಲಕಿ ಗರ್ಭಿಣಿಯಾದ ಹಿನ್ನಲೆಯಲ್ಲಿ ತನಿಖೆ ನಡೆಸಿದಾಗ ಈ ಹಿಂದಿನ ಅತ್ಯಾಚಾರ ನಡೆಸಿದ ವಿಚಾರ ಸೇರಿದಂತೆ ದಯಾನಂದ್ ಅತ್ಯಾಚಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಕೊಣಾಜೆ ಪೊಲೀಸ್ ಠಾಣಾ ಪ್ರಭಾರ ಇನ್ಸ್ಪೆಕ್ಟರ್ ಕೆ.ಎಂ. ಶರೀಪ್ ನೇತೃತ್ವದಲ್ಲಿ ಬಂಧಿಸಲಾಗಿದ್ದು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.