ಕಾಸರಗೋಡು, ಜ 29 : ಎಂಡೋಸಲ್ಫಾನ್ ಸಂತ್ರಸ್ಥರು ಮಾರ್ಚ್ 15 ರಿಂದ ತಿರುವನಂತಪುರದಲ್ಲಿರುವ ಸೆಕ್ರಟರಿಯಟ್ ಮುಂಭಾಗದಲ್ಲಿ ಅನಿರ್ಧಿಷ್ಟಾದಧಿ ಮುಷ್ಕರ ನಡೆಸುವ ಮೂಲಕ ಉಗ್ರ ಹೋರಾಟಕ್ಕೆ ತೀರ್ಮಾನಿಸಿದ್ದಾರೆ.ಇದರ ಪೂರ್ವಭಾವಿಯಾಗಿ ಜ. 30ರಂದು ತಿರುವನಂತಪುರದ ಸೆಕ್ರಟರಿಯಟ್ ಮುಂಭಾಗದಲ್ಲಿ ಒಂದು ದಿನದ ಧರಣಿ ನಡೆಸುವರು.ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ನಡೆಸಲು ಸಂತ್ರಸ್ತ ಹೋರಾಟ ಸಮಿತಿ ತೀರ್ಮಾನಿಸಿದೆ. ನಾಳೆ ನಡೆಯಲಿರುವ ಪ್ರತಿಭಟನೆ ಬಳಿಕವೂ ಸರಕಾರ ಸಂತ್ರಸ್ಥರ ಬಗ್ಗೆ ನಿರ್ಲಕ್ಷ ವಹಿಸಿದ್ದಲ್ಲಿ ಮಾರ್ಚ್ 31 ರಿಂದ ಅನಿರ್ಧಿಷ್ಟಾವಧಿ ನಿರಾಹಾರ ಸತ್ಯಾಗ್ರಹ ಮೂಲಕ ತೀವ್ರ ಹೋರಾಟ ನಡೆಸುವರು.ಸಂತ್ರಸ್ಥರು ಮತ್ತು ಕುಟುಂಬಸ್ಥರು ಹೋರಾಟದಲ್ಲಿ ಪಾಲ್ಗೊಳ್ಳುವರು. ಎಂಡೋಸಲ್ಫಾನ್ ಸಂತ್ರಸ್ಥ ಹೋರಾಟ ಸಮಿತಿ ನೇತೃತ್ವ ನೀಡುವರು. ಸಂತ್ರಸ್ತರನ್ನು ರಾಜ್ಯ ಸರಕಾರ ಸಂಪೂರ್ಣ ವಾಗಿ ನಿರ್ಲಕ್ಷಿಸಿದ್ದು , ಸಂತ್ರಸ್ಥ ಪಟ್ಟಿಯಿಂದ ಅರ್ಹರನ್ನು ಕೈ ಬಿಡಲಾಗಿದೆ. ಎಂಡೋಸಲ್ಫಾನ್ ಕಂಪೆನಿ ಜೊತೆ ಸರಕಾರ ಲಾಭಿ ನಡೆಸುತ್ತಿದೆ ಎಂದು ಸಂತ್ರಸ್ಥರು ದೂರಿದ್ದಾರೆ.
ಸಾಂದರ್ಭಿಕ ಚಿತ್ರ