ಮಂಗಳೂರು, ಜ 17 (Daijiworld News/MSP): ಅಡ್ಯಾರಿನ ಕಣ್ಣೂರಿನಲ್ಲಿ ಬುಧವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭ ಅರೆ ಸೇನಾಪಡೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಕೆಲವರ ವಿರುದ್ದ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಸಂಜೆ ಸಮಾವೇಶ ಮುಕ್ತಾಯ ಹಂತ ತಲುಪುತ್ತಿದ್ದಂತೆ ಸ್ಥಳದಲ್ಲಿ ಅರೆಸೇನಾ ಪಡೆ ಬಂದೋಬಸ್ತ್ ಗೆ ಹೊರಟಿತ್ತು. ಅಷ್ಟರಲ್ಲಿ ಸಮಾವೇಶಕ್ಕೆ ಆಗಮಿಸಿದ ಜನರಲ್ಲಿ ಕೆಲವರು ಅರೆಸೇನಾ ಪಡೆ ವಿರುದ್ದ ಗೋ ಬ್ಯಾಕ್ ಪೊಲೀಸ್ ಎಂದು ಘೋಷಣೆ ಕೂಗಿದ್ದರು.
ಈ ಹಿನ್ನಲೆಯಲ್ಲಿ ಅರೆಸೇನಾ ಪಡೆಯ ಕರ್ತವ್ಯಕ್ಕೆ ಅಡ್ಡಿಯಾಗಿತ್ತು ಎಂದು ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.