ಬೆಂಗಳೂರು ಜ 28: ರಾಜ್ಯದಲ್ಲಿ ಪದೇ ಪದೇ ಮುಷ್ಕರ ಹಾಗೂ ಬಂದ್ ಗೆ ಕರೆ ನೀಡುತ್ತಿರುವ ಕನ್ನಡ ಚಳವಳಿ ವಾಟಾಳ್ ಪಕ್ಷ ನಿಷೇದಿಸುವ ಸಂಬಂಧ ರಾಜ್ಯ ಸರ್ಕಾರ ಹಾಗೂ ವಾಟಾಳ್ ನಾಗರಾಜ್ ಗೆ ಹೈಕೋರ್ಟ್ ನೋಟಿಸು ಜಾರಿ ಮಾಡಿದೆ. ರಾಜ್ಯದಲ್ಲಿ ಪದೇ ಪದೇ ಬದ್ ಕರೆ ನೀಡುತ್ತಿರುವುದರಿಂದ ರಾಜ್ಯದ ಜನತೆಗೆ ತೊಂದರೆಯಾಗುತ್ತಿದೆ. ಶಾಲಾ ಮಕ್ಕಳಿಗೆ ಹಾಗೂ ನೌಕರರು ತೀವ್ರ ತೊಂದರೆಗೊಳಗಾದರೆ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ ಎಂದು, ರಾಜ್ಯ ಬಂದ್ ಪ್ರಶ್ನಿಸಿ ರಾಜಾಜಿನಗರ ಶ್ರದ್ಧಾ ಪೋಷಕರ ಸಂಘಟನೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಹೆಚ್.ಜಿ. ರಮೇಶ್ ಮತ್ತು ನ್ಯಾ. ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠ ವಾದ ವಿವಾದಗಳನ್ನು ಅಲಿಸಿ ನಂತರ ಕನ್ನಡ ಚಳವಳಿ ವಾಟಾಳ್ ಪಕ್ಷ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್ ವಿಚಾರಣೆಯನ್ನು ಫೆ.2 ಕ್ಕೆ ಮುಂದೂಡಿದೆ.