ಮಂಗಳೂರು, ಜ 17(DaijiworldNews/SM): ರಾಷ್ಟ್ರೀಯ ಸೇವಾ ಯೋಜನೆ, ಕೆನರಾ ಕಾಲೇಜು ಮಂಗಳೂರು ಆಯೋಜಿಸಿದ ಸೃಜನ 2020, ರಾಷ್ಟ್ರೀಯ ಸೇವಾ ಯೋಜನೆ ಸ್ವಯಂ ಸೇವಕರಿಗಾಗಿ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಸ್ಪರ್ಧೆ ಜರುಗಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವ ವಿದ್ಯಾನಿಲಯದ ರಾಷ್ಟ್ರೀಯ ಸೇವಾ ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ.ಎ. ಮಾತನಾಡಿ ಸಾಮಾಜಿಕ ಜವಾಬ್ದಾರಿಯ ಪ್ರಜ್ಞೆಯನ್ನು ಆದಷ್ಟು ಪರಿಣಾಮಕಾರಿಯಾಗಿ ಯುವ ಮನಸ್ಸುಗಳಿಗೆ ಅರ್ಥೈಸುವಲ್ಲಿ ಎನ್ನೆಸ್ಸೆಸ್ ಸಹಕಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವವನ್ನು ರೂಪಿಸಿ ದೇಶ ಪ್ರೇಮವನ್ನು ಅರಳಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಇಂದಿರಾ ಪ್ರಿಯಾದರ್ಶಿನಿ ಪ್ರಶಸ್ತಿ ವಿಜೇತೆ ಸುಜಾತ ಶೆಣೈ ಭಾಗವಹಿಸಿದ್ದರು. ಪ್ರಾಂಶುಪಾಲ ಡಾ.ಕೆ.ವಿ. ಮಾಲಿನಿ ಅಧ್ಯಕ್ಷತೆ ವಹಿಸಿದ್ದರು. ರಾಸೆ.ಯೋ. ಅಧಿಕಾರಿಗಳಾದ ದೇಜಮ್ಮ, ಸೀಮಾ ಪ್ರಭು.ಎಸ್, ವಿದ್ಯಾರ್ಥಿ ಸಂಘಟಕರಾದ ಬಿಂದಿಯಾ ಶೇಟ್, ಧನುಷ್ ಉಪಸ್ಥಿತರಿದ್ದರು. ಸುಮಾರು ೨೨ ಕಾಲೇಜಿನ ರಾ.ಸೆ.ಯೋ. ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.