ಉಡುಪಿ ಜ 29 : ಇಲ್ಲಿನ ನಗರಸಭೆಯ 2018 -19 ನೇ ಸಾಲಿನ 1.06 ಕೋಟಿ ರೂಪಾಯಿ ಮಿಗತೆ ಬಜೆಟ್ನ್ನು ಅದ್ಯಕ್ಷೆ ಮೀನಾಕ್ಷೀ ಮಾಧವ ಬನ್ನಂಜೆ ಇಂದು ಸಾಮಾನ್ಯ ಸಭೆಯಲ್ಲಿ ಮಂಡಿಸಿದ್ರು.28.69 ಕೋಟಿ ರೂಪಾಯಿ ಆರಂಭ ಶಿಲ್ಕು ಮತ್ತು 62.61 ಕೋಟಿರೂ ಒಟ್ಟು ಸ್ವೀಕೃತಿಗಳು ಸೇರಿದಂತೆ ಒಟ್ಟು 91.30 ಕೋಟಿ ರೂಪಾಯಿ ಅದಾಯವನ್ನು ನಿರೀಕ್ಷಿಸಲಾಗಿದ್ದೂ 90.24 ಕೋಟಿ ರೂಪಾಯಿ ಈ ಬಾರಿಯ ಬಜೆಟ್ನಲ್ಲಿ ಅಂದಾಜಿಸಲಾಗಿದೆ. ಕಾಂಗ್ರೆಸ್ ಐದು ವರ್ಷಗಳ ನಗರಸಭೆ ಆಡಳಿತ ಅವದಿಯ ಕೊನೆಯ ಬಜೆಟ್ ಇದಾಗಿದೆ. ನಗರಕ್ಕೆ 24 ಗಂಟೆ ನೀರು ಪೂರೈಕೆ ಮಾಡುವ ಸಲುವಾಗಿ ವಾರಹಿ ನದಿಯಿಂದ ನೀರು ಪೂರೈಸುವ ಕಾಮಗಾರಿ , ತಾಜ್ಯ ವಿಲೇವಾರಿ, ಒಳ ಚರಂಡಿ ಕಾಮಗಾರಿಗೆ ಬಜೆಟ್ನಲ್ಲಿ ಪ್ರಮುಖ ಅದ್ಯತೆ ನೀಡಲಾಗಿದೆ. ಇನ್ನೂ ಇದೊಂದು ಜನಪರ ಬಜೆಟ್ ಎಂಬುವುದಾಗಿ ಆಡಳಿತ ಪಕ್ಷದ ಸದಸ್ಯೆ ಸೆಲಿನಾ ಕರ್ಕಡ ಬಣ್ಣಿಸಿದ್ರು. ವಿಪಕ್ಷ ನಾಯಕ ಡಾ ಎಂ ಆರ್ ಪೈ ಅವರು ಬಜೆಟ್ ಕುರಿತಾಗಿ ಮಾತನಾಡಿದ್ರು, ನಗರಸಭೆಯನ್ನು ಪೇಪರ್ ಮುಕ್ತ ಹಾಗೂ ಸೋಡಿಯಂ ಮುಕ್ತ ದಾರಿ ದೀಪ ಘೋಷಣೆ ಉತ್ತಮ ಹೆಜ್ಜೆಯಾಗಿದೆ. ಉಳಿದಂತೆ ಈ ಬಜೆಟ್ನಲ್ಲಿ ಅಂತಹ ಹೊಸತೇನು ಇಲ್ಲ. ಇನ್ನೂ ನಗರಸಭೆಯ 35 ವಾರ್ಡಿನ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ದಿ ಕಾರ್ಯ ನಡೆಸಲಾಗಿದೆ ಎಂದು ಬಜೆಟ್ನಲ್ಲಿ ಉಲ್ಲೇಖಿಸಲಾಗಿದೆ. ಇಂತಹ ಕೆಲಸ ನಗರಸಭೆ ಆಡಳಿತ ಪಕ್ಷದಿಂದ ನಡೆದಿಲ್ಲ. ನಗರಸಭೆ ವಾರ್ಡಿನ 35 ಸದಸ್ಯರಿಗೆ ಸರಿ ಸಮಾನವಾಗಿ ಅನುಧಾನ ಹಂಚಿಕೆಯಾಗಿಲ್ಲ ಎಂದು ಅಸಮಾಧನ ವ್ಯಕ್ತ ಪಡಿಸಿದ್ರು. ಬಜೆಟ್ ಮಂಡನೆಯ ಬಳಿಕ ವಾರಹಿ ನದಿ ನೀರು ನಗರಕೆ ಪೂರೈಕೆ ಮಾಡುವ ವಿಚಾರದಲ್ಲಿ ವಿಪಕ್ಷಗಳಿಂದ ಅವಿಶ್ವಾಸ ವ್ಯಕ್ತ ಪಡಿಸಿದ್ರು. ಈ ಯೋಜನೆ ಜಾರಿಗೆ ಬರುವುದು ಕಷ್ಟ ಸಾದ್ಯ. ಕೊಳವೆ ಮುಖಾಂತರ ನಗರಕ್ಕೆ ವಾರಹಿ ನದಿಯಿಂದ ನೀರು ತರುವುದು ಹೆಚ್ಚು ಸೂಕ್ತ. ಕಾಲುವೆಯ ಮೂಲಕ ನೀರು ನಗರಕ್ಕೆ ಪೂರೈಕೆ ಮಾಡುವುದಾದರೇ ಮತ್ತೇ ಉಡುಪಿಯ ಜನತೆ 25 ವರ್ಷ ಕಾಯಬೇಕು. ವಾರಹಿ ನೀರು ಉಡುಪಿಗೆ ತರುವ ವಿಚಾರ ಸ್ವಾಗತಾರ್ಹ. ಆದ್ರೆ ವಾರಹಿ ನೀರು ತರುವ ವಿಚಾರದಲ್ಲಿ ಈಗಾಗಲೇ ಅಲ್ಲಿಯ ಸ್ಥಳೀಯಾಡಳಿತ ಹಾಗೂ ಜನಪ್ರತಿನಿಧಿಗಳು ವಿರೋದ ವ್ಯಕ್ತಪಡಿಸಿದ್ದಾರೆ. ನಗರಸಭೆ ಈ ವಿಚಾರಲ್ಲಿ ಸಮಾಲೋಚಿತವಾಗಿ ಹೆಜ್ಜೆ ಇಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಈ ವಿಚಾರದಲ್ಲಿ ಬಿಕ್ಕಟ್ಟು ತಲೆದೋರುವುದು ಖಂಡಿತ ಎಂದು ವಿಪಕ್ಷದ ಸದಸ್ಯ ದಿನಕರ್ ಹೆರ್ಗ ಅವರು ಆಡಳಿತ ಪಕ್ಷವನ್ನು ಎಚ್ಚರಿಸಿದ್ರು. ಉಡುಪಿ ನಗರಸಭೆ ಉಪದ್ಯಾಕ್ಷೆ ಸಂದ್ಯಾ ತಿಲಕ್ರಾಜ್, ನಗರಸಭೆ ಪೌರಯುಕ್ತ ಮಂಜುನಾಥ್ಯ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಸಾಂದರ್ಭಿಕ ಚಿತ್ರ