ಉಳ್ಳಾಲ, ಜ 19 (Daijiworld News/MB) : ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಶನಿವಾರ ಬಂಧನ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಮದನಿ ನಗರ ನಿವಾಸಿ ಮುಹಮ್ಮದ್ ಕಬೀರ್ ತಸ್ಲೀಂ ಯಾನೆ ತಸ್ಲೀಂ (21), ಹಾಗೂ ಮಾಸ್ತಿಕಟ್ಟೆ ನಿವಾಸಿ ಮಹಮ್ಮದ್ ಹಾರಿಸ್ ಯಾನೆ ಆಚಿ (23) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ ಪೊಲೀಸರು ಸುಮಾರು 60 ಗ್ರಾಂ ತೂಕದ ಚಿನ್ನಾಭರಣ ಹಾಗೂ ಲ್ಯಾಪ್ಟಾಪ್ನ್ನು ವಶಕ್ಕೆ ಪಡೆದಿದ್ದು ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಪುತ್ತೂರಿನ ಅನ್ವರ್ ಹಾಗೂ ಮದನಿನಗರದ ಸಿಯಾಲ್ ಎಂಬವರು ತಲೆಮರೆಸಿಕೊಂಡಿದ್ದು ಪೊಲೀಸರು ಅವರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಜನವರಿ ೧೬ರಂದು ಬಗಂಬಿಲ ರಸ್ತೆಯ ಶ್ರುತಿ ನಿಲಯ ಫ್ಲಾಟಿನಿಂದ ಇನ್ಫೋಸಿಸ್ ಉದ್ಯೋಗಿ ಕರಣ್ ಎಂಬವರ ಲ್ಯಾಪ್ಟಾಪ್ ಕಳವಾದ ಕುರಿತು ದೂರು ದಾಖಲಾಗಿದ್ದು ಆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಇಬ್ಬರು ಆರೋಪಿಗಳ ಮೇಲೂ ಈ ಮೊದಲು ಕೆಲವು ಪ್ರಕರಣಗಳು ಧಾಖಲಾಗಿದೆ.