ಮಂಗಳೂರು, ಜ 19 (Daijiworld News/MB) : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಡಿ.19ರಂದು ನಡೆದ ಪ್ರತಿಭಟನೆಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಕೇರಳ - ಕರ್ನಾಟಕ ಗಡಿ ಭಾಗದ ವಿದ್ಯಾರ್ಥಿಗಳು, ಮಹಿಳೆಯರು, ಕಾರ್ಮಿಕರು ಸೇರಿ 650ಕ್ಕೂ ಅಧಿಕ ಮಂದಿಗೆ ನೊಟೀಸ್ ನೀಡಲಾಗಿದೆ.
ನಿಷೇದಾಜ್ಞೆ ಇರುವ ಸಂದರ್ಭದಲ್ಲಿ ಪ್ರತಿಭಟನೆ ನಡೆಸಲಾಗಿದ್ದು ಹಲವಾರು ಮಂದಿ ಈ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆಗೆಂದು ಸ್ಟೇಟ್ ಬ್ಯಾಂಕ್ಗೆ ಬಂದಿದ್ದರು. ಈ ಸಂದರ್ಭದಲ್ಲಿ ಹಿಂಸಾಚಾರ ನಡೆದಿದ್ದು ಹಲವರಿಗೆ ಗಾಯವಾಗಿದ್ದು ಇಬ್ಬರು ಪೊಲೀಸರ ಗುಂಡೇಟಿನಿಂದ ಪ್ರಾಣ ಕಳೆದು ಕೊಂಡಿದ್ದರು.
ಪೌರತ್ವ ಕಾಯ್ದೆ ವಿರೋಧಿಸಿ ನಿಷೇದಾಜ್ಞೆ ಇದ್ದರೂ ಪ್ರತಿಭಟನೆ ನಡೆಸಿದವರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಪೊಲೀಸರು ಮೊಬೈಲ್ ಟವರ್ ಮುಖೇನ ಸ್ಟೇಟ್ಬ್ಯಾಂಕ್ಗೆ ಬಂದವರನ್ನು ಪತ್ತೆಹಚ್ಚಿ ಹಲವು ಕಾರಣಗಳಿಗಾಗಿ ನಗರಕ್ಕೆ ಬಂದ ಜನರಿಗೆ ನೊಟೀಸ್ ನೀಡಲಾಗಿದೆ ಎಂದು ತಿಳಿದು ಬಂದಿದೆ. ಈ ನೊಟೀಸ್ಗಳನ್ನು ಸ್ಫೀಡ್ ಪೋಸ್ಟ್ ಮೂಲಕ ಕಳುಹಿಸಲಾಗಿದ್ದು ನೋಟಿಸ್ ಸ್ವೀಕರಿಸಿದವರು ಡಿಸೆಂಬರ್ 19 ರಂದು ನಗರದಲ್ಲಿ ಅಕ್ರಮವಾಗಿ ಒಗ್ಗೂಡಿ ಅವಾಂತರಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ನಮೂದಿಲಾಗಿದೆ. ಈ ಕುರಿತು ನೋಟಿಸ್ ಪಡೆದಿರುವವರು ನಿಗದಿ ಮಾಡಲಾದ ದಿನಕ್ಕಿಂತ ಮೊದಲಾಗಿ ನಗರದ ಬಂದರ್ ಪೊಲೀಸ್ ಠಾಣೆಗೆ ಬಂದು ವರದಿ ಮಾಡಲುತಿಳಿಸಲಾಗಿದೆ.
ಕೇರಳದ ರಾಜ್ಯದ ಗಡಿಯಲ್ಲಿ ವಾಸಿಸುವ ಸಾವಿರಾರು ಜನರು ಶಿಕ್ಷಣ ಮತ್ತು ವ್ಯಾಪಾರ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ನಗರಕ್ಕೆ ಭೇಟಿ ನೀಡುತ್ತಾರೆ. ಈವರೆಗೆ ಸುಮಾರು 650 ಜನರಿಗೆ ನೋಟಿಸ್ ನೀಡಲಾಗಿದ್ದರೂ, ಇನ್ನು ಸಾವಿರಕ್ಕೂ ಹೆಚ್ಚು ಜನರಿಗೆ ನೊಟೀಸ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ. ನೋಟಿಸ್ ನೀಡಲಾಗಿರುವ ಪೈಕಿ ಹೆಚ್ಚಿನ ಜನರು ಗಡಿಭಾಗದಲ್ಲಿ ವಾಸಿಸುವ ಮುಸ್ಲಿಮರಾಗಿದ್ದಾರೆ. ಈಗ ಈಗ ನೊಟೀಸ್ಗಳ ವಿರುದ್ಧ ವ್ಯಾಪಕ ಅಸಮಾಧನಾ ವ್ಯಕ್ತವಾಗಿದೆ.
ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಸೇರಿದಂತೆ ನೋಟಿಸ್ ಪಡೆದ ಹಲವಾರು ಜನರು ಶನಿವಾರ ಬಂದರ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದು ಪೊಲೀಸರು ಅವರ ಮೊಬೈಲ್ ಸಂಖ್ಯೆ, ಹೆಸರು, ಸಹಿ ಪಡೆದುಕೊಂಡು ಅಪರಾಧ ವಿಭಾಗದಿಂದ ನೋಟಿಸ್ ಬಂದಲ್ಲಿ ತಪ್ಪದೇ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ನೊಟೀಸ್ ಪಡೆದ ಹಿನ್ನಲೆಯಲ್ಲಿ ತನಿಖೆಗೆ ಹಾಜರಾದ ಜನರು ತಾವು ನಗರಕ್ಕೆ ಯಾವ ಕಾರಣಕ್ಕಾಗಿ ಬಂದಿದ್ದೇವೆ ಎಂದು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಮಂಜೇಶ್ವರದಿಂದ ಬಂದರ್ ಪೊಲೀಸ್ ಠಾಣೆಯಗೆ ಬಂದ ವ್ಯಕ್ತಿ, "ನನ್ನ ಇಬ್ಬರು ಮಕ್ಕಳು ನಗರದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಎಂದಿನಂತೆ ಕಾಲೇಜಿಗೆ ತೆರಳಿದ್ದಾರೆ. ಕಾಲೇಜು ಮುಗಿಸಿ ಮನೆಗೆ ಹಿಂತಿರುಗಿ ಬಂದಿದ್ದರು. ಅವರಿಗೂ ನೊಟೀಸ್ ನೀಡಲಾಗಿದೆ. ಕೇರಳದ ಗಡಿ ಭಾಗದ ಮೀನುಗಾರರು ಹಾಗೂ ಮಹಿಳೆಯರಿಗೂ ನೊಟೀಸ್ ನೀಡಲಾಗಿದೆ ಅವರು ಕೂಡಾ ವಿಚಾರಣೆಗೆ ಹಾಜಾರಾಗಿದ್ದಾರೆ. ವಸ್ತುಗಳನ್ನು ಖರೀದಿ ಮಾಡುವ ಸಲುವಾಗಿ ಮಂಗಳೂರಿಗೆ ಬಂದವರಿಗೂ ನೊಟೀಸ್ ನೀಡಲಾಗಿದೆ. ನೋಟಿಸ್ ದೊರೆತ ಹಿನ್ನಲೆಯಲ್ಲಿ ಹಲವು ವಿದ್ಯಾರ್ಥಿಗಳ ತಮ್ಮ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದಾರೆ. ಇನ್ನು ಹಲವರು ಮಂಗಳೂರಿಗೆ ಬರುವುದನ್ನೇ ನಿಲ್ಲಿಸಿದ್ದಾರೆ. ನಾನು ಮಾಧ್ಯಮಗಳಿಗೆ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಕೋಪಗೊಂಡ ಪೊಲೀಸರು ನನ್ನ ಪೋಟೋ ತೆಗೆದಿದ್ದಾರೆ" ಎಂದು ಹೇಳಿದ್ದಾರೆ.
ಮಂಜೇಶ್ವರದ ಮಾಡಾ ನಿವಾಸಿಯಾದ ಅಬ್ದುರ್ ರಝಾಕ್ ಎಂಬವರು ಮೀನಿನ ಟೆಂಪೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದು ಮೀನನನ್ಉ ಸಾಗಿಸುವ ಉದ್ದೇಶದಿಂದ ಮಂಗಳೂರಿಗೆ ಆಗಮಿಸಿದ್ದರು. ಮೀನು ದೊರೆಯದ ಹಿನ್ನಲೆಯಲ್ಲಿ ಬಂದರ್ ಮಸೀದಿಯಲ್ಲಿ ನಮಾಜ್ ಮಾಡಿ ಮನಗೆ ಹಿಂದಿರುಗಿ ಬಂದಿದ್ದರು. ಮೀನು ದೊರೆಯುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ಮಗನೊಂದಿಗೆ ಬೈಕ್ನಲ್ಲಿ ಮತ್ತೆ ಬಂದರ್ದಕ್ಕೆಗೆಗ ಬಂದ ಅವರು ಮೀನು ಹೇರಿಕೊಂಡು ಟೆಂಪೋದಲ್ಲಿ ಹಿಂದಕ್ಕೆ ಹೋಗಿದ್ದರು ಎಂದು ತಿಳಿಸಿದ್ದು "ನಾನು ಹಾಗೂ ನನ್ನ ಮಗ ವೈಯಕ್ತಿಕ ಕಾರಣಕ್ಕಾಗಿ ಮಂಗಳೂರಿಗೆ ಬಂದಿದ್ದೇವೆ ಹೊರತು ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ" ಎಂದು ಹೇಳಿದ್ದಾರೆ.
ಆದರೆ ಈ ಬಗ್ಗೆ ಬಂದರ್ ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು ಅವರನ್ನು ಸಂಪರ್ಕಿಸಿದಾಗ ಪೊಲೀಸರು ಈ ಕುರಿತು ಯಾವುದೇ ನೊಟೀಸ್ಗಳನ್ನು ನೀಡಿಲ್ಲ ಹಾಗೂ ಯಾರ ವಿಚಾರಣೆತಯು ಮಾಡಿಲ್ಲ ಎಂದು ತಿಳಿಸಿರುವುದಾಗಿ ವರದಿಯಾಗಿದೆ. ಆದರೆ ಜನರು ತಮಗೆ ನೋಟಿಸ್ ನೀಡಲಾಗಿದ್ದು ಆ ನೋಟಿಸ್ನಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 143- ಅಕ್ರಮ ಗುಂಪುಗೂಡುವಿಕೆ, 147 - ಗಲಭೆಯಲ್ಲಿ ಭಾಗಿ, 148 - ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದುವಿಕೆ, 188 - ನಿಷೇದಾಜ್ಞೆ ಉಲ್ಲಂಘನೆ, 353 - ಹಲ್ಲೆ, 324 - ಹಿಂಸೆ, 427 - ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಹಾಗೂ 120 - ಪಿತೂರಿ ಸಹಿತ ಹಲವು ಪ್ರಕರಣಗಳನ್ನು ಉಲ್ಲೇಖ ಮಾಡಲಾಗಿದೆ.