ಮಂಗಳೂರು, ಜ 19(DaijiworldNews/SM): ಬೆಂಗಳೂರಿನಲ್ಲಿ ರವಿವಾರ ನಡೆದ 3ನೇ ವರ್ಷದ ವೀಫಾ ಕಪ್ ಸೌತ್ ಝೋನ್ ಟೈಕೊಂಡೋ ಮತ್ತು ಪೂಂಮ್ಸೆ ಚಾಂಪಿಯನ್ ಶೀಫ್ ನ 32 ಕೆ.ಜಿ. ವಿಭಾಗದಲ್ಲಿ ಕಲ್ಲಡ್ಕದ ಮೊಹಮ್ಮದ್ ಶಾಮಿಲ್ ಚಿನ್ನದ ಪದಕ ಪಡೆದಿದ್ದಾರೆ.
ಕಲ್ಲಡ್ಕ ಗೋಲ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ನಲ್ಲಿ 6ನೇ ತರಗತಿ ವಿದ್ಯಾರ್ಥಿಯಾದ ಮೊಹಮ್ಮದ್ ಶಾಮಿಲ್, ನಾರಂಕೋಡಿ ಮೊಹಮ್ಮದ್ ಸಿದ್ದೀಕ್ ಮತ್ತು ಶಮೀಮಾ ದಂಪತಿಯ ದ್ವಿತೀಯ ಪುತ್ರನಾಗಿದ್ದಾನೆ. ಈತ ಇಸಾಕ್ ನಂದಾವರ ಜೊತೆ ಟೈಕೊಂಡೋ ತರಬೇತಿ ಪಡೆಯುತ್ತಿದ್ದಾನೆ. ಸತತ ಅಭ್ಯಾಸ, ಪರಿಶ್ರಮದ ಫಲವಾಗಿ ಈತ ಪ್ರಶಸ್ತಿ ಪಡೆದುಕೊಂಡಿದ್ದಾನೆ. ಈ ಮೂಲಕ ಮುಂದಿನ ಸ್ಪರ್ಧೆಗಳಲ್ಲಿ ಭಾಗವಹಿಸಲು ಈತನ ಉತ್ಸಾಹ ಹೆಚ್ಚಿದಂತಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚಿನ ಪದಕಗಳನ್ನು ಪಡೆಯಲಿ ಎಂಬುವುದು ನಮ್ಮ ಆಶಯ.