ಮಂಜೇಶ್ವರ, ಜ.20 (Daijiworld News/PY) : ನಿಗೂಢವಾಗಿ ನಾಪತ್ತೆಯಾಗಿದ್ದ ಮೀಯಪದವು ವಿದ್ಯಾವರ್ಧಕ ಶಾಲೆಯ ಶಿಕ್ಷಕಿ ಚಿಗುರುಪಾದೆ ನಿವಾಸಿ ಬಿ.ಕೆ ರೂಪಶ್ರೀ (40) ಅವರ ಸಾವು ನೀರಿಗೆ ಬಿದ್ದು ಸಂಭವಿಸಿದೆ ಎಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆಸಲಾದ ಪೋಸ್ಟ್ಮಾರ್ಟಂನ ವರದಿಯಲ್ಲಿ ತಿಳಿಸಲಾಗಿದೆ.
ತಲೆಗೂದಲು ಹಾಗೂ ಉಡುಪು ಕಳಚಿಕೊಳ್ಳಲು ಸಮುದ್ರದ ಅಲೆಗಳು ಕಾರಣವಾಗಿರಬಹುದು ಎಂದು ಪೋಸ್ಟ್ಮಾರ್ಟಂಗೆ ನೇತೃತ್ವ ನೀಡಿದ್ದ ಫೋರೆನಿಕ್ಸ್ ತಜ್ಞ ಡಾ.ಕೆ ಗೋಪಾಲ ಕೃಷ್ಣ ಪಿಳ್ಳೆ ಅವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
ನಾಪತ್ತೆಯಾದ ನಂತರ ಅರೆನಗ್ನ ಸ್ಥಿತಿಯಲ್ಲಿ ಕಂಡುಬಂದಿದ್ದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.