ಕುಂದಾಪುರ, ಜ 21 (Daijiworld News/MB) : ಸಮವಸ್ತ್ರದಲ್ಲಿ ಬಂದ ಇಬ್ಬರು ಪೊಲೀಸ್ ಸಿಬ್ಬಂದಿಗಳು ಆಟೋ ಚಾಲಕನನ್ನು ಬಲವಂತವಾಗಿ ಪೊಲೀಸ್ ಠಾಣೆಗೆ ಎಳೆದೊಯ್ದು, ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿ ಕೊನೆಗೆ ಪೊಲೀಸ್ ಠಾಣೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದ್ದು ಆಟೋ ಚಾಲಕನು ರೈಲ್ವೆ ಹಳಿಗಳಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಈ ಘಟನೆ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯ ನಾಗೂರಿಯಲ್ಲಿ ನಡೆದಿದ್ದು ಮಂಗಳವಾರ ಬೆಳಕಿಗೆ ಬಂದಿದೆ. ಮೃತ ಆಟೋ ಚಾಲಕನನ್ನು ಕಿರಿಮಂಜೇಶ್ವರ ಬಳಿಯ ಶಲೆಬಾಗಿಲು ನಿವಾಸಿ ರಾಮ ಪೂಜಾರಿ (34) ಎಂದು ಗುರುತಿಸಲಾಗಿದೆ.
ಸೋಮವಾರ ಸಂಜೆ ಸುಮಾರು 3.30 ಗಂಟೆಗೆ ರಾಮ ಪೂಜಾರಿಯವರನ್ನು ಪೊಲೀಸರು ಬಂದು ಗಂಗೂಳಿ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದು ಪ್ರಶ್ನಿಸಿದಾಗ ಬಾಲಕಿಯೊಬ್ಬಳು ರಾಮ ಪೂಜಾರಿ ವಿರುದ್ಧ ದೂರು ನೀಡಿದ್ದು ವಿಚಾರಣೆಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿಸಿದ್ದರು. ಆದರೆ ಸಂಜೆಯಾದರೂ ಅವರು ಮನೆಗೆ ಬಾರದ ಹಿನ್ನಲೆಯಲ್ಲಿ ಮನೆಯವರನ್ನು ಗಂಗೂಳಿ ಪೊಲೀಸ್ ಠಾಣೆಗೆ ತೆರಳಿ ರಾಮ ಪೂಜಾರಿಯವರಿಗೆ ಯಾಕೆ ಹೊಡೆಯಲಾಗಿದೆ ಎಂದು ಕೇಳಿದಾಗ ಉದ್ಧಟತನದಿಂದ ಹಾಗೂ ಅಸಭ್ಯವಾಗಿ ರಾಮ ಪೂಜಾರಿಯವರ ಮೃತದೇಹವನ್ನು ಮನೆಗೆ ಕಳುಹಿಸುವುದಾಗಿ ಹೇಳಿದ್ದರು. ರಾಮ ಪೂಜಾರಿಯ ಮನೆಯವರು ಹಿಂದಿರುಗಿ ಮನೆಗ ಬಂದಾಗ ಅವರಿಗೆ ದೂರವಾಣಿ ಕರೆ ಬಂದಿದ್ದು ಪೂಜಾರಿಯವರನ್ನು ಹಿಂದಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದ್ದಾರೆ. ಅವರು ರಾಮ ಪೂಜಾರಿಯವರನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಿ ಮನೆಗೆ ಕಳುಹಿಸಿದ್ದರು. ಆದರೆ ರಾಮ ಪೂಜಾರಿಯವರು ಮೃತದೇಹ ನಾಗೂರು ಬಳಿಯ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಮಂಗಳವಾರ ಬೆಳಿಗ್ಗೆಯಿಂದ ರಾಮ ಪೂಜಾರಿ ಅವರ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಬಿಲ್ಲವ ಸಮುದಾಯದ ಯುವಕರು ಪ್ರತಿಭಟನೆ ನಡೆಸುತ್ತಿದ್ದು ಸಾವಿಗೆ ಪೊಲೀಸರು ನಡೆಸಿದ ಕ್ರೂರ ಹಲ್ಲೆ ಕಾರಣ ಎಂದು ಆರೋಪಿಸಿದ್ದಾರೆ.
ಕುಂದಾಪುರ ಉಪವಿಭಾಗ ಅಧಿಕಾರಿ ಹರಿರಾಮ್ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸುತ್ತಿದ್ದಾರೆ. ಎಸ್ಪಿ ಸ್ಥಳಕ್ಕೆ ಆಗಮಿಸಬೇಕು, ಪೊಲೀಸರನ್ನು ಅಮಾನತುಗೊಳಿಸಬೇಕು ಮತ್ತು ಆತ್ಮಹತ್ಯೆಗೆ ಪ್ರಚೋದಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತಾರೆ. ಎಸ್ಪಿ ವಿಷ್ಣುವರ್ಧನ್ ಸ್ಥಳಕ್ಕೆ ಆಗಮಿಸಿದ್ದಾರೆ ಎಂದು ವರದಿಯಾಗಿದೆ.
ರಾಮ ಪೂಜಾರಿ ಆ ಬಾಲಕಿಯನ್ನು ಪ್ರೀತಿಸುತ್ತಿದ್ದು ಆಕೆಯೊಂದಿಗೆ ಇದ್ದ ವಿಡಿಯೋವನ್ನು ಆಕೆಯ ಮನೆಯವರಿಗೆ ತೋರಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದನು. ಈ ಕುರಿತು ಬಾಲಕಿಯ ಮನೆಯವರು ರಾಮ ಪೂಜಾರಿಯವರ ವಿರುದ್ಧ ದೂರು ದಾಖಲಿಸದೆ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲು ಹೇಳಿದ್ದರು. ಹಾಗಾಗಿ ರಾಮ ಪೂಜಾರಿಯವರನ್ನು ಎಚ್ಚರಿಕೆ ನೀಡಲಾಗಿದೆ, ಹಲ್ಲೆ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಆ ಬಳಿಕ ಆಗಮಿಸಿದ ಎಎಸ್ಪಿ ಕುಮಾರ್ ಅವರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ಆದರೆ ರಾಮ ಪೂಜಾರಿಯವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ ಎಂದು ಪ್ರತಿಭಟನಕಾರರು ಆರೋಪ ಮಾಡಿದ್ದಾರೆ.
ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಹಿಂದಕ್ಕೆ ನೀಡಬೇಕು ಹಾಗೂ ರಾಮ ಪೂಜಾರಿಯವರ ಮೃತದೇಹವನ್ನು ಕಳುಹಿಸುವುದಾಗಿ ಬೆದರಿಕೆ ಹಾಕಿದ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರಾಮ ಪೂಜಾರಿಯವರ ಮನೆಯವರು ಒತ್ತಾಯ ಮಾಡಿದ್ದಾರೆ.
ರಾಮ ಪೂಜಾರಿಯವರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿದೆ. ಅವರ ಕೈ, ಕಾಲು ಮುಖ ಭಾತುಕೊಂಡಿತ್ತು. ಹಲ್ಲೆಯಿಂದಾಗಿ ಅವರು ಮಾನಸಿಕವಾಗಿ ನೊಂದಿದ್ದರು ಎಂದು ಮನೆಯವರು ಆರೋಪ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಮರಣೋತ್ತರ ಪರೀಕ್ಷೆ ಹಾಗೂ ಸಿಸಿ ಟಿವಿ ಕ್ಯಾಮೆರಾದ ದೃಶ್ಯಾವಳಿ ದೊರೆತ ಬಳಿಕವಷ್ಟೆ ಸತ್ಯಾಂಶ ಹೊರಬರಬೇಕು.