ಮಂಗಳೂರು, ಜ 31: ವಿವಾದಾತ್ಮಕ ಹೇಳಿಕೆ ನೀಡಿದ್ದ ವಿ ಹೆಚ್ ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರಕರಣ ದಾಖಲಾಗಿದೆ. 153 (A) ಹಾಗೂ 116 ಐಪಿಸಿ ಸೆಕ್ಷನ್ ನಡಿ ಬಂದರು ಠಾಣಾ ಪಿಎಸ್ ಐ ಅನಂತ ಮುರುಡೇಶ್ವರ, ಸ್ವ ಹಿತಾಸಕ್ತಿ ಪ್ರಕರಣ ದಾಖಲಿಸಿದ್ದಾರೆ. ಜನವರಿ ೨೮ರಂದು ಮಂಗಳುರಿನ ಟಿ ವಿ ರಮಣ ಪೈ ಸಭಾಂಗಣದಲ್ಲಿ ನಡೆದ ಹಡೆದವ್ವನ ಶಾಪ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಾ ದೀಪಕ್ ರಾವ್ ಅಮಾಯಕನಾಗಿದ್ದು, ಆತನ ಹತ್ಯೆಯ ಪ್ರತೀಕಾರವಾಗಿ ಬಶೀರ್ ಕೊಲೆಯಾಗಿದೆ ಎಂದು ಹತ್ಯೆಯನ್ನು ಸಮರ್ಥಿಸಿಕೊಂಡಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗಿತ್ತಲ್ಲದೆ ಸಾಮಾಜಿಕ ಜಾಲತಾಣದಲ್ಲಿಯೂ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಈ ಪ್ರಚೋದನಾತ್ಮಕ ಹೇಳಿಕೆಯ ಹಿನ್ನಲೆಯಲ್ಲಿ ಮಂಗಳೂರು ಉತ್ತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.