ವಿಟ್ಲ, ಜ 21 (DaijiworldNews/SM): ಸ್ನಾನಕ್ಕೆ ತೆರಳಿದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ವಿಟ್ಲ ಪಡ್ನೂರು ಗ್ರಾಮದ ಪಿಲಿಂಜದಲ್ಲಿ ಮಂಗಳವಾರ ನಡೆದಿದೆ. ವಿಟ್ಲ ಪಡ್ನೂರು ಪಿಲಿಂಜ ನಿವಾಸಿ ಸೋಮಪ್ಪ ಪೂಜಾರಿ (58) ಮೃತ ವ್ಯಕ್ತಿಯಾಗಿದ್ದಾರೆ.
ಬೆಳಿಗ್ಗೆ ಎಂದಿನಂತೆ ಸ್ನಾನಕ್ಕೆಂದು ತೋಟದ ಬಾವಿಯ ಸಮೀಪ ತೆರಳಿದ್ದಾರೆ. ಆದರೆ ತೆರಳಿದವರು ಮರಳಿ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆ ಮನೆಯವರು ಪರಿಶೀಲನೆ ಮಾಡಿದ್ದಾರೆ. ಈ ಸಂದರ್ಭ ಬಾವಿಗೆ ಹಾಕಿದ ಅಡಿಕೆ ಮರದ ತಡೆ ತುಂಡಾಗಿ ಬಿದ್ದಿರುವುದು ಕಂಡು ಬಂದಿದೆ.
ಈ ಸಂದರ್ಭ ಬಾವಿಯಲ್ಲಿ ಪರಿಶೀಲನೆ ನಡೆಸಿದಾಗ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದು, ಫ್ರೆಂಡ್ಸ್ ವಿಟ್ಲ ತಂಡದ ಸಹಕಾರದಿಂದ ಮೃತ ದೇಹವನ್ನು ಮೇಲೆತ್ತಿದ್ದಾರೆ.
ಪುತ್ರ ನೀಡಿದ ದೂರಿನ ಪ್ರಕಾರ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.