ಮಂಗಳೂರು, ಜ 22 (Daijiworld News/MB) : ನಗರದ ಅಂಗಡಿಯೊಂದರಲ್ಲಿ ನಡೆದ ಕಳವು ಪ್ರಕರನದ ಆರೋಪಿ ಮೊಹಮ್ಮದ್ ಪತಾವುಲ್ಲ ಯಾನೆ ಪತ್ತ (30) ಎಂಬಾತನಿಗೆ 2ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯ 5 ವರ್ಷಗಳ ಕಠಿಣ ಶಿಕ್ಷೆ ಹಾಗೂ 20 ಸಾವಿರ ರೂಪಾಯಿ ದಂಡ ವಿಧಿಸಿದೆ.
2012ರ ಜ 02ರಂದು ಆರೋಪಿ ಪತ್ತಾವುಲ್ಲ ರಾತ್ರಿ ಹೊತ್ತು ನ್ಯೂಚಿತ್ರಾ ಜಂಕ್ಷನ್ ಬಳಿಯ ಅಂಗಡಿಯೊಂದಕ್ಕೆ ನುಗ್ಗಿ ೨೫ ಸಾವಿರ ರೂಪಾಯಿ ಮೌಲ್ಯದ ಕಂಪ್ಯೂಟರ್ ಹಾಗೂ ಇತರ ಉಪಕರಣಗಳನ್ನು ದರೋಡೆ ಮಾಡಿದ್ದು ಈ ಕುರಿತು ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಸಬ್ಇನ್ಸ್ಪೆಕ್ಟರ್ ರಾಮಕೃಷ್ಣ ಅವರು ಮಾಡಿದ್ದು ಇನ್ಸ್ಟೆಕ್ಟರ್ ಸುಧಾಕರ್ ಅವರು ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದರು.
2ನೇ ಹೆಚ್ಚುವರಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶೆ ಅನಿತಾ ಅವರು ಈ ಪ್ರಕರಣದ ವಿಚಾರಣೆ ನಡೆಸಿದ್ದು ಆರೋಪ ಸಾಬೀತು ಮಾಡಿ ಶಿಕ್ಷೆ ವಿಧಿಸಿದ್ದಾರೆ. ಅಪರಾಧಿಗೆ ಬಾಗಿಲು ಮುರಿದು ಒಳಗೆ ಪ್ರವೇಶ ಮಾಡಿದಕ್ಕಾಗಿ 5 ವರ್ಷಗಳ ಕಠಿಣ ಸಜೆ ಹಾಗೂ 20 ಸಾವಿರ ರೂಪಾಯಿ ದಂಡ ದಂಡ ತಪ್ಪಿದಲ್ಲಿ ಮೂರು ತಿಂಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದೆ.
ಹಿರಿಯ ಸಹಾಯಕ ಸಹಕಾರಿ ಅಭಿಯೋಜಕರಾದ ಮಾರುತಿ ಡೊಕ್ಕನಂ ಮಾಂಗ್ಲಿ ಅವರು ವಾದ ಮಂಡಿಸಿದ್ದಾರೆ.