ಉಡುಪಿ, ಜ.22 (Daijiworld News/PY) : ಮಣಿಪಾಲದ ಡಾ ಟಿ ಎಂ ಎ ಫೌಂಡೇಶನ್-2018ರ ವಾರ್ಷಿಕ ಪ್ರಶಸ್ತಿಗಾಗಿ ಕೊಂಕಣಿ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ರಿಚೀ ಜಾನ್ ಪೈಸ್ ಬರೆದಿರುವ 'ಫಾಥರ್' ಎಂಬ ಕೊಂಕಣಿ ಸಣ್ಣ ಕಥೆಗಳ ಸಂಗ್ರಹವನ್ನು ಪ್ರಶಂಸೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. 2017 ರಲ್ಲಿ ಪ್ರಕಟವಾದ ಈ ಪುಸ್ತಕ ಕನ್ನಡದಲ್ಲಿ ಬರೆಯಲಾಗಿದ್ದು, ಮಂಗಳೂರಿನ ನಿಯಾ ಪಬ್ಲಿಷರ್ಸ್ ಪಾಂಡೇಶ್ವರ ಪ್ರಕಟಿಸಿದೆ. ಈ ಕೃತಿಗೆ ಪ್ರಶಸ್ತಿಯ ಜೊತೆ 10,000ರೂ.ಗಳ ನಗದು ದೊರೆಯಲಿದೆ.
ರಿಚೀ ಅವರು ಒಬ್ಬ ಕವಿ, ನಾಟಕಕಾರ ಹಾಗೂ ಹಾಸ್ಯ ಲೇಖಕರಾಗಿದ್ದಾರೆ ಅಲ್ಲದೇ, ಇವರು ಕೊಂಕಣಿ ಹಾಗೂ ಇಂಗ್ಲೀಷ್ ಸಾಹಿತ್ಯದ ಲೇಖಕರೂ ಆಗಿದ್ದಾರೆ. ಇವರು ಹೆಚ್ಚಾಗಿ ಇಂಗ್ಲೀಷ್ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿದ್ದಾರೆ.
'ಫಾಥರ್' ಒಂದು ಸಣ್ಣ ಕಥಾ ಸಂಕಲನವಾಗಿದ್ದು, ಪ್ರೀತಿ, ನೋವು, ಮನೋವಿಜ್ಞಾನ, ಕಾನೂನು, ಭೌತಶಾಸ್ತ್ರ, ಮಾನವ ಸಂಬಂಧ ಇತ್ಯಾದಿ ಸೇರಿದಂತೆ ವಿವಿಧ ವಿಷಯಗಳನ್ನು ಅನ್ವೇಷಿಸುವ 11 ಕಥೆಗಳನ್ನು ಒಳಗೊಂಡಿದೆ.
ಡಾ ಟಿ ಎಂ ಎ ಫೌಂಡೇಶನ್ 2018 ರ ವಾರ್ಷಿಕ ಪ್ರಶಸ್ತಿಗಾಗಿ ಆಯ್ಕೆಯಾದ ಮತ್ತೊಂದು ಕೊಂಕಣಿ ಪುಸ್ತಕ ಗೋವಾದ ಜಾನಪದ ಸೌಂದರ್ಯದ ಪ್ರಬಂಧವಾದ 'ಗೋನ್ಯಾಚ್ಯಾ ಲೋಕವೇದಚೆ ಸೌಂದರ್ಯ ಶಾಸ್ತ್ರ' ಕೃತಿಯನ್ನು ಗೋವಾದ ಆಲ್ಟೊ ಪೊರ್ವೊರಿಮ್ನ ಡಾ.ಪಾಂಡುರಂಗ್ ಪಾಲ್ದೇಸಾಯಿ ಬರೆದಿದ್ದು, 2018ರ ಅತ್ಯುತ್ತಮ ಕೊಂಕಣಿ ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.
ದೇವನಾಗರಿಯಲ್ಲಿ ಬರೆದಿರುವ ಈ ಪುಸ್ತಕವನ್ನುಗೋವಾದ ಪೊರ್ವೊರಿಮ್, ಸಸಯಾ ಪಬ್ಲಿಷರ್ಸ್ 2017ರಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಪ್ರಶಸ್ತಿಯಾಗಿ 25 ಸಾವಿರ ರೂ.ಗಳ ನಗದು ದೊರೆಯಲಿದೆ.