ಮುಂಬೈ, ಜ 31: ಸ್ಕಾರ್ಪಿಯನ್ ಸರಣಿಯ ಸ್ವದೇಶಿ ನಿರ್ಮಿತ 3ನೇ ಜಲಾಂತರ್ಗಾಮಿ ನೌಕೆ 'ಕಾರಂಜ್' ಅನ್ನು ja.31ರ ಬುಧವಾರ ಮುಂಬಯಿಯ ಮಜಗಾಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ಸಂಸ್ಥೆಯ ಧಕ್ಕೆಯಲ್ಲಿ ಭಾರತೀಯ ನೌಕಾಪಡೆಗೆ ಅಧಿಕೃತವಾಗೆ ಸೇರ್ಪಡೆಗೊಳಿಸಲಾಯಿತು.ಈ ಹಿಂದೆ ಇದೇ ಸ್ಕಾರ್ಪಿಯನ್ ಸರಣಿಯ ಪ್ರಥಮ ಜಲಾಂತರ್ಗಾಮಿ ನೌಕೆ ಐಎನ್ ಎಸ್ ಕಲ್ವರಿ, ಕಳೆದ ಸೆಪ್ಚೆಂಬರ್ ನಲ್ಲಿ ಸೇನೆಗೆ ಸೇರಿಸಲಾಗಿತ್ತು. ಇದರ ಬೆನ್ನಲ್ಲೇ ೨ನೇ ಜಲಾಂತರ್ಗಾಮಿ ನೌಕೆಯಾದ ಐಎನ್ಎಸ್ ಕಂದೇರಿ ಡಿಸೆಂಬರ್ನಲ್ಲಿ ನೌಕಾಪಡೆಯನ್ನು ಸೇರ್ಪಡೆಗೊಂಡಿತ್ತು.ಸದ್ಯ ಭಾರತೀಯ ಸೇನೆಗೆ ಸೇರ್ಪಡೆಯಾಗಿರುವ ಕಾರಂಜ್ ನೌಕೆ ಮೂರನೆಯದ್ದಾಗಿದೆ.

ಕಾರಂಜ್ ನೌಕೆ ವಿಶೇಷತೆ:
ಕಾರಂಜ್ ನೌಕೆಯ ಟೈಗರ್ ಶಾರ್ಕ್ ರೀತಿಯಲ್ಲಿ ಚುರುಕುತನವನ್ನು ಹೊಂದಿದ್ದು ಭಾರತದ ಸಾಗರದ ಅತ್ಯಂತ ಆಳದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಎಂತಹ ಸಂದರ್ಭವನ್ನು ಕೂಡ ಎದುರಿಸಿ ಮುನ್ನುಗ್ಗುವ ಕಾರ್ಯಕ್ಷಮತೆ ಈ ಕಾರಂಜ್ ನೌಕೆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಷ್ಟೇ ಅಲ್ಲದೆ ಅತ್ಯಾಧುನಿಕ ಸಲಕರಣೆ, ಸೌಕರ್ಯ ಮತ್ತು ತಂತ್ರಜ್ಞಾನವನ್ನು ಹೊಂದಿರುವ ಕಾರಂಜ್ ಸ್ಕಾರ್ಪಿಯೋ ಜಲಾಂತರ್ಗಾಮಿ ಅತ್ಯಂತ ನಿಗೂಢ ಚಲನವಲನ ಸಾಮರ್ಥ್ಯವನ್ನು ಹೊಂದಿದೆಯಲ್ಲದೆ ಕರಾರುವಾಕ್ ಗುರಿ ನಿರ್ದೇಶಿತ ಶಸ್ತ್ರಾಸ್ತ್ರಗಳನ್ನು ಒಳಗೊಂಡಿದೆ