ಮಂಗಳೂರು, ಜ.23 (Daijiworld News/PY) : ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಪ್ರಕರಣದ ಆರೋಪಿಯಾದ ಆದಿತ್ಯ ರಾವ್ನನ್ನು ಮಂಗಳೂರಿನ ಬಾವುಟ ಗುಡ್ಡೆಯಲ್ಲಿರುವ ನ್ಯಾಯಾಲಯಕ್ಕೆ ಗುರುವಾರ ಪೊಲೀಸರು ಹಾಜರು ಪಡಿಸಿದ್ದು, ಈ ವೇಳೆ ಆರೋಪಿ ಆದಿತ್ಯ ರಾವ್ ನನ್ನಿಂದ ತಪ್ಪಾಗಿದೆ ಎಂದು ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾನೆ.
ಎಸಿಪಿ ಬೆಳ್ಳಿಯಪ್ಪ ಅವರ ನೇತೃತ್ವದಲ್ಲಿ ಬಾಂಬರ್ ಆದಿತ್ಯ ರಾವ್ನ ತನಿಖೆಗೆ ಕೋರ್ಟ್ಗೆ ಪೊಲೀಸರು ಹಾಜರು ಪಡಿಸಿದ್ದಾರೆ.
ಮಂಗಳೂರು ಪ್ರಥಮ ದರ್ಜೆ 6ನೇ ನ್ಯಾಯಾಲಯದ ನ್ಯಾಯಾಧೀಶ ಕಿಶೋರ್ ಕುಮಾರ್ ಕೆ.ಎನ್. ಆರೋಪಿ ಆದಿತ್ಯಾಗೆ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲು ಆದೇಶ ನೀಡಿದ್ದಾರೆ.
ಬಾಂಬರ್ ಆದಿತ್ಯರಾವ್ ಕೋರ್ಟ್ಗೆ ಹಾಜರು ಪಡಿಸುವ ಹಿನ್ನೆಲೆ ಕೋರ್ಟ್ ಸುತ್ತಾ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.