ಸುಳ್ಯ, ಜ.23 (Daijiworld News/PY) : "ಪೌರತ್ವ ಕಾಯ್ದೆ ಬಗ್ಗೆ ಕೆಲವು ಜನರಲ್ಲಿ ತಪ್ಪು ಅಭಿಪ್ರಾಯಗಳಿದ್ದು ಸರಕಾರ ಮಟ್ಟದಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ" ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಸುಳ್ಯದಲ್ಲಿ ಕಾರ್ಯಕರ್ತರ ಸಭೆಯನ್ನು ಉದ್ದೇಶಿ ಮಾತನಾಡಿದ ಅವರು, "ಪೌರತ್ವ ಕಾಯ್ದೆಯ ಬಗ್ಗೆ ಕೆಲವು ಜನರಲ್ಲಿ ತಪ್ಪಾದ ಅಭಿಪ್ರಾಯಗಳಿವೆ, ಸರಕಾರ ಮಟ್ಟದಲ್ಲಿ ಇದರ ಬಗ್ಗೆ ಅರಿವು ಮೂಡಿಸುವ ವಿಚಾರವಾಗಿ ಚಿಂತನೆ ನಡೆಯುತ್ತಿದೆ" ಎಂದರು.
ಈ ಸಂದರ್ಭ ಶಾಸಕ ಅಂಗಾರ,ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಎ.ವಿ ತೀರ್ಥರಾಮ,ಬಿ.ಜೆ.ಪಿ ಮಂಡಲ ಮಾಜಿ ಅಧ್ಯಕ್ಷ ವೆಂಕಟ್ ವಳಂಬೆ, ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.