ಉಡುಪಿ, ಜ 22 (DaijiworldNews/SM): ತಾಯಿ ಇಲ್ಲದ ಮಕ್ಕಳನ್ನು ಮಲ ತಂದೆಯೊಬ್ಬರು ಬಿಟ್ಟು ಪರಾರಿಯಾದ ಘಟನೆ ಹೆಜಮಾಡಿಯಲ್ಲಿ ನಡೆದಿದೆ. ಬಿಜಾಪುರ ಮೂಲದ ರಾಜು ಎಂಬಾತ ಎದೇ ಮೂಲದ ಮಹಿಳೆಯೊಬ್ಬರನ್ನು ಮದುವೆಯಾಗಿದ್ದರು, ಮಹಿಳೆಯು ಅನಾರೋಗ್ಯದಿಂದ ಸಾವನ್ನಪ್ಪಿದ್ದರು.
ಆಕೆಯ ಮೊದಲ ಗಂಡ ಹೆಜಮಾಡಿ ಮನೆಯೊಂದರಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. 9ನೇ ತರಗತಿಯಲ್ಲಿ ವಿಧ್ಯಾಭ್ಯಾಸ ಮಾಡುವ ಈ ಇಬ್ಬರು ಮಕ್ಕಳನ್ನು ಅದೇ ಮನೆಯಲ್ಲಿ ಹತ್ತು ದಿನಗಳ ಹಿಂದೆ ಮಲತಂದೆ ಬಿಟ್ಟು ಪರಾರಿಯಾಗಿದ್ದಾರೆ. ಅನಾಥರಾಗಿದ್ದ ಮಕ್ಕಳನ್ನು ಕಂಡ ಹೆಜಮಾಡಿ ಪಂಚಾಯತ್ ಉಪಾಧ್ಯಕ್ಷ ಸುಧಾಕರ ಕರ್ಕೇರ ಅವರು ಮಾನವೀಯ ನೆಲೆಯಲ್ಲಿ ಮಕ್ಕಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ನೀಡಿದ್ದರು.
ಬಳಿಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಡುಪಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಭಾಕರ್ ಆಚಾರ್ಯ,ಕಾನೂನು ಪರಿವೀಕ್ಷಣಾಧಿಕಾರಿ ,ಸಮಾಜ ಕಾರ್ಯಕರ್ತೆ ಗ್ಲೀಶಾ ಮೊಂತೆರೋ ಪಂಚಾಯತ್ ಉಪಾಧ್ಯಕ್ಷರ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು ಮಕ್ಕಳನ್ನು ಮಕ್ಕಳ ಪಾಲನೆ ಮತ್ತು ಪೋಷಣೆ ಕೇಂದ್ರಕ್ಕೆ ಮಾಹಿತಿ ನೀಡಲಾಯಿತು. ಅವರ ಆದೇಶದಂತೆ ಬಾಲಕನನ್ನು ಸಿ.ಎಸ್.ಐ ಬಾಯ್ಸ್ ಹೋಮ್ ಉಡುಪಿ ಹಾಗೂ ಬಾಲಕಿಯನ್ನುನಿಟ್ಟೂರಿನ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.