ಮಂಗಳೂರು, ಜ 25 (Dajiworld News/MB) : ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಪ್ರಯಾಣಿಕನೋರ್ವನಿಗೆ ಚಹಾದಲ್ಲಿ ಅಮಲು ಪದಾರ್ಥ ಬೆರೆಸಿ ಪ್ರಜ್ಞಾಹೀನರನ್ನಾಗಿಸಿ ಸೊತ್ತುಗಳನ್ನು ದೋಚಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಗುರುವಾರ ಬಂಧನ ಮಾಡಿದ್ದಾರೆ.
ಬಂಧಿತ ಆರೋಪಿಗಳನ್ನು ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೋರು ಗ್ರಾಮದ ಕರ್ನೂರು ನಾಗನಡ್ಕ ನಿವಾಸಿ ಯಾಕುಬ್ (37) ಹಾಗೂ ಕರ್ನೂರು ಗ್ರಾಮದ ಪಾಲತಾಡಿ ನಿವಾಸಿ ಮಹಮ್ಮದ್ (35) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.
ಆರೋಪಿಗಳು 2019ರ ಆಗಸ್ಟ್ 22ರಂದು ರಾತ್ರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನ ಸೊತ್ತನ್ನು ಲೂಟಿ ಮಾಡಿ ಪರಾರಿಯಾಗಿದ್ದು ಈ ಪೈಕಿ ಕೆಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಹಾಗೆಯೇ ಈ ಆರೋಪಿಗಳು ಎಲ್ಲಾದರೂ ಈ ರೀತಿ ಕೃತ್ಯ ಎಸಗಿದ್ದಲ್ಲಿ ಅಥವಾ ಯಾವುದಾದರೂ ಪ್ರಕರಣದಲ್ಲಿ ಬೇಕಾಗಿದ್ದರೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯನ್ನು ಸಂಪರ್ಕ ಮಾಡುವಂತೆ ಕೋರಲಾಗಿದೆ.