ಕುಂದಾಪುರ, ಜ 25 (Dajiworld News/MB) : ಮಹಿಳೆಯೊಬ್ಬರು ಸೀಟ್ ಬೆಲ್ಟ್ ಹಾಕಿಲ್ಲ ಎಂಬ ಕಾರಣಕ್ಕೆ 500 ರೂಪಾಯಿ ದಂಡ ಹಾಕಲು ಮುಂದಾದ ಹೈವೆ ಪ್ಯಾಟ್ರೋಲಿಂಗ್ ಪೊಲೀಸರನ್ನು ಮಹಿಳೆ ತರಾಟೆಗೆ ತೆಗೆದುಕೊಂಡ ಘಟನೆ ಹೆಮ್ಮಾಡಿಯಲ್ಲಿ ನಡೆದಿದೆ.
ಸೀಟ್ ಬೆಲ್ಟ್ ಹಾಕದೆ ನಾನು ಕಾರು ಓಡಿಸುವುದಿಲ್ಲ. ಅಷ್ಟು ಮಾತ್ರವಲ್ಲದೇ ನನ್ನಲ್ಲಿ ಎಲ್ಲಾ ದಾಖಲೆಗಳು ಇದೆ. ನಾನು ಸೀಟ್ ಬೆಲ್ಟ್ ಧರಿಸಿದ್ದೇನೆಯೇ ಇಲ್ಲವೇ ಎಂದು ಪರಿಶೀಲನೆ ಮಾಡದೆ ಏಕಾಏಕಿ ಕಾರು ತಡೆದು ನಿಲ್ಲಿಸಿ 500 ರೂಪಾಯಿ ದಂಡ ಹಾಕಿ ದಾಖಲೆ ವಶಕ್ಕೆ ಪಡೆಯುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಹಿಳೆ ಇಷ್ಟೆಲ್ಲಾ ಹೇಳಿದ ಬಳಿಕ ಪೊಲೀಸರು ದಾಖಲೆ ಪತ್ರವನ್ನು ವಾಪಾಸ್ ಮಾಡಿದ್ದು ಇದೀಗ ಅದರ ವಿಡಿಯೋ ವೈರಲ್ ಆಗಿದೆ.