ಉಡುಪಿ, ಜ 25 (Daijiworld News/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್ ಕಸ್ಟಡಿಗೆ ಪಡೆದಿರುವ ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ತನಿಖೆ ಮುಂದುವರಿಸಿದ್ದು, ಜ.25 ಶನಿವಾರ ಪೊಲೀಸರು ಇಲ್ಲಿನ ಕುಂಜಿಬೆಟ್ಟುವಿನಲ್ಲಿರುವ ಕರ್ಣಾಟಕ ಬ್ಯಾಂಕ್ಗೆ ಕರೆತಂದಿದ್ದು ಮಹಜರು ನಡೆಸಿದ್ದಾರೆ.
ಆರೋಪಿ ಆದಿತ್ಯ ರಾವ್ ಕರ್ಣಾಟಕ ಬ್ಯಾಂಕ್ ಕುಂಜಿಬೆಟ್ಟುವಿನಲ್ಲಿರುವ ಶಾಖೆಯಲ್ಲಿ ಲಾಕರ್ ಹೊಂದಿದ್ದು, ಈ ಹಿನ್ನಲೆಯಲ್ಲಿ ಅದನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ನಾಲ್ಕನೇ ಶನಿವಾರದ ನಿಮಿತ್ತ ಬ್ಯಾಂಕ್ ರಜಾವಿದ್ದರೂ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ಬ್ಯಾಂಕ್ ತೆರೆಯಿಸಿ ಲಾಕರ್ ನಲ್ಲಿ ತಪಾಸಣೆ ಕೈಗೊಂಡಿದ್ದು ಲಾಕರ್ ನಿಂದ ಹಲವು ಅನುಮಾನಾಸ್ಪದ ವಸ್ತುಗಳು ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದಿತ್ಯ ರಾವ್ ವರ್ಷದ ಹಿಂದೆಯೇ ಬ್ಯಾಂಕ್ ಲಾಕರ್ ಓಪನ್ ಮಾಡಿದ್ದ ಎಂದು ತಿಳಿದುಬಂದಿದೆ.