ಮಲ್ಪೆ, ಜ 25 (Daijiworld News/MSP): ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್ ಕಸ್ಟಡಿಗೆ ಪಡೆದಿರುವ ಮಂಗಳೂರು ಉತ್ತರ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ತನಿಖೆ ಮುಂದುವರಿಸಿದ್ದು, ಜ.೨೫ ಶನಿವಾರ ಪೊಲೀಸರು ಇಲ್ಲಿನ ಕುಂಜಿಬೆಟ್ಟುವಿನಲ್ಲಿರುವ ಕರ್ಣಾಟಕ ಬ್ಯಾಂಕ್ಗೆ ಕರೆತಂದಿದ್ದು ಮಹಜರು ನಡೆಸಿದ ಬಳಿಕ ಆತನನ್ನು ಮಲ್ಪೆಗೆ ಕರೆತರಲಾಗಿದೆ.
ಮಲ್ಪೆಯಿಂದ ಮಧ್ಯಾಹ್ನದ ವೇಳೆಗೆ ಇಂಡಿಗೋ ಸಂಸ್ಥೆಗೆ ಬಾಂಬ್ ಬೆದರಿಕೆ ಕರೆ ಮಾಡಿದ ಹಿನ್ನಲೆಯಲ್ಲಿ ಆತನನ್ನು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮಲ್ಪೆಯ ಮಹಜರಿಗಾಗಿ ಕರೆತರಲಾಗಿತ್ತು. ,ಅಲ್ಪೆ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ಗೂಡಂಗಡಿಯಲ್ಲಿ ಕುಳಿತು ತನ್ನ ಮೊಬೈಲ್ ನಿಂದ ಬೆದರಿಕೆ ಕರೆ ಮಾಡಿ ಅಲ್ಲೇ ಸಿಮ್ ಎಸೆದು ತೆರಳಿದ್ದ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಆತನನ್ನು ಕರೆತಂದು ಗೂಡಂಗಡಿ ಸುತ್ತಮುತ್ತ ಸಿಮ್ ಗಾಗಿ ಪೊಲೀಸರು ಹುಡುಕಾಟ ನಡೆಸಿದರು ದೊರಕಿಲ್ಲ ಎಂದು ತಿಳಿದುಬಂದಿದೆ.
ಮಲ್ಪೆ ಪರಿಸರದಲ್ಲೂ ಕೆಲಕಾಲ ಕಾರ್ಯನಿರ್ವಹಿಸಿದ್ದರಿಂದ ಈ ಪರಿಸರದ ಪರಿಚಯದಲ್ಲಿ ಮಲ್ಪೆಗೆ ಆಗಮಿಸಿ ಈ ಕೃತ್ಯ ಎಸಗಿರಬಹುದು ಎಂದು ಅಂದಾಜಿಸಲಾಗಿದೆ.