ಮಂಗಳೂರು, ಜ 01 (DaijiworldNews/SM): ಭಾರತ ಇಂದು ಅಂಬೇಡ್ಕರ್ ಅವರು ಹಾಕಿಕೊಟ್ಟಂತಹ ಸಂವಿಧಾನದಿಂದಾಗಿ ಇಂದು ಜಗತ್ತಿನಲ್ಲೇ ಅತ್ಯಂತ ಪ್ರಭಾವಶಾಲಿ ದೇಶವಾಗಿ ಬೆಳೆದು ನಿಂತಿದೆ. ಪ್ರಧಾನಿ ನರೇಂದ್ರ ಮೋದಿಯವರು, ಜಮ್ಮು ಕಾಶ್ಮೀರದ ೩೭೦ನೇ ವಿಧಿಯನು ರದ್ದುಗೊಳಿಸುವುದರ ಮೂಲಕ ಅಖಂಡ ಭಾರತಕ್ಕೆ ಅಂಬೇಡ್ಕರ್ ರವರ ಆಶಯದಂತೆ ನಾಂದಿ ಹಾಡಿದ್ದಾರೆ ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೇಳಿದರು.
ಬೆಳ್ತಂಗಡಿಯಲ್ಲಿ ನಡೆದ ೭೧ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪದ್ಮಶ್ರೀ, ಪದ್ಮವಿಭೂಷಣ ಪ್ರಶಸ್ತಿಗಳು ಇಂದು ಗ್ರಾಮೀಣ ಭಾಗದ ನಿಜವಾಗಿ ಸಲ್ಲಬೇಕಾದ ಸಾಧಕರಿಗೆ ಸಲ್ಲುತ್ತಿದೆ ಎಂದು ಹೇಳಿದರು. ಗಣರಾಜ್ಯೋತ್ಸವದ ಧ್ವಜಾರೋಹಣವನ್ನುಬೆಳ್ತಂಗಡಿ ತಹಶಿಲ್ದಾ ಗಣಪತಿ ಗಜಾನನ ಶಾಸ್ತ್ರೀ ಅವರು ನೆರವೇರಿಸಿದರು. ಧ್ವಜಾರೋಹಣಕ್ಕೂ ಮುನ್ನ ಬೆಳ್ತಂಗಡಿಯ ಪ್ರಮುಖ ಬೀದಿಯಲ್ಲಿ ಮೆರವಣಿಗೆಯು ನಡೆಯಿತು.