ಮಂಗಳೂರು, ಜ 27 (Daijiworld News/MSP): ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಬಂಧಿತನಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿ ಆದಿತ್ಯ ರಾವ್ನನ್ನು ಅನ್ ಲೈನ್ ವ್ಯವಹಾರಗಳ ಬಗ್ಗೆ ಮಂಗಳೂರು ಸೈಬರ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.ಈ ಹಿನ್ನಲೆಯಲ್ಲಿ ಆದಿತ್ಯರಾವ್ ನನ್ನು ಬಾನುವಾರ ಪೊಲೀಸರು ಸ್ಥಳ ಮಹಜರಿಗಾಗಿ ಎಲ್ಲಿಗೂ ಕರೆದೊಯ್ದಿಲ್ಲ ಎಂದು ತಿಳಿದುಬಂದಿದೆ.
ಹುಸಿ ಬಾಂಬ್ ಬೆದರಿಕೆ ಕರೆ ಹಾಗೂ ಆತನ ಆನ್ ಲೈನ್ ವ್ಯವಹಾರಗಳ ಬಗ್ಗೆ ಸೈಬರ್ ಪೊಲೀಸರು ಕೃತ್ಯದ ಬಗ್ಗೆ ಮಂಗಳೂರು ಸೈಬರ್ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಆತನು ಬಾಂಬ್ ತಯಾರಿಕೆ ಬಗ್ಗೆ ಆನ್ಲೈನ್ ಮೂಲಕ ಬೇರೆ ಬೇರೆಯಾಗಿ ಸ್ಫೋಟಕ ಸಾಮಗ್ರಿಗಳನ್ನು ಚೆನ್ನೈಯಿಂದ ಖರೀದಿಸಲೆಂದು ಮಾಡಿದ ಇ-ಮೇಲ್ ವ್ಯವಹಾರಗಳ ಬಗ್ಗೆಯೂ ತನಿಖೆ ಆರಂಭಿಸಿದ್ದಾರೆ.
ಪಣಂಬೂರಿನಲ್ಲಿರುವ ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕಚೇರಿಯ ಪೊಲೀಸ್ ಕಸ್ಟಡಿಯಲ್ಲಿ ವಿಶೇಷ ತನಿಖಾ ತಂಡ ಆದಿತ್ಯನ ನಡೆಸಿದ ಇ-ಮೇಲ್ ಮತ್ತು ಆನ್ಲೈನ್ ವಹಿವಾಟುಗಳ ಬಗ್ಗೆ ವಿವರ ಸಂಗ್ರಹಿಸಿ ವಿಶ್ಲೇಷಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.