ಕುಂದಾಪುರ, ಜ 27 (Daijiworld News/MSP): ಗಣರಾಜ್ಯೋತ್ಸವದ ಪಥ ಸಂಚಲನ ಮುಗಿದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮೊದಲು ಕುಂದಾಪುರ ಸಹಾಯಕ ಆಯುಕ್ತ ಕೆ. ರಾಜು ಅವರ ಪುತ್ರ ಒಂದು ನಿಮಿಷ ಪೊಲೀಸ್ ಆಗಿ ನೆರೆದವರ ಗಮನ ಸೆಳೆದರು.
ಕುಂದಾಪುರದ ಓಕ್ವುಡ್ ಇಂಡಿಯನ್ ಸ್ಕೂಲ್ನಲ್ಲಿ ಎರಡನೇ ತರಗತಿ ಓದುತ್ತಿರುವ ಸಹಾಯಕ ಆಯುಕ್ತರ ಪುತ್ರ ಶ್ರೀಹರ್ಷ ಎಎಸ್ಪಿ ಹರಿರಾಮ್ ಶಂಕರ್ ಅವರ ಪೊಲೀಸ್ ಟೋಪಿ ಹಾಗೂ ದಂಡ ಹಿಡಿದು ಎಎಸ್ಪಿಯವರ ಜೊತೆ ಫೋಟೊಗೆ ಫೋಸ್ ಕೊಟ್ಟರು. "ನಾನು ಅಪ್ಪನಂತೆಯೇ ಎಸಿಯಾಗುತ್ತೇನೆ" ಎಂದು ಏಳರ ಹರೆಯದ ಪುಟ್ಟ ಪೋರ ಶ್ರೀಹರ್ಷ ನಗುತ್ತಲೇ ಹೇಳಿದರು. ಈ ವೇಳೆಯಲ್ಲಿ ಸ್ವತಃ ಸಹಾಯಕ ಆಯುಕ್ತರೇ ತಮ್ಮ ಮಗನ ಫೋಟೋ ಕ್ಲಿಕ್ಕಿಸಿದ ದೃಶ್ಯ ಕಂಡುಬಂತು.